ತೋರಣಗಲ್ಲು ವಿಜಯನಗರ ಉಕ್ಕು ಕಾರ್ಖಾನೆಗೆ ಬೀಗ?

ಸರ್ವೋಚ್ಚ ನ್ಯಾಯಾಲಯ ಅಕ್ರಮ ಗಣಿಗಾರಿಕೆಯ ಮೇಲೆ ಅಂಕುಶ ಹೇರಿದ ಮೇಲೆ ಕಬ್ಬಿಣದ ಅದಿರಿನ ಪೂರೈಕೆ ಗಣನೀಯವಾಗಿ ಇಳಿದಿದೆ. ಸ್ಟೇನ್ ಲೆಸ್ ಸ್ಟೀಲ್ ಉತ್ಪಾದನೆಯನ್ನು ಈಗಾಗಲೆ ಶೇ.70ರಷ್ಟು ಸ್ಥಗಿತಗೊಳಿಸಲಾಗಿದ್ದು, ಸಂಪೂರ್ಣ ನಿಂತರೆ ಕರ್ನಾಟಕದ ಮಾರುಕಟ್ಟೆಯಲ್ಲಿ ಸ್ಟೀಲ್ ದರ ಭಾರೀ ಪ್ರಮಾಣದಲ್ಲಿ ಏರಲಿದೆ.
ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದ ಅತಿ ದೊಡ್ಡ ಉಕ್ಕು ಉತ್ಪಾದಕ ಕಾರ್ಖಾನೆಯಾದ ವಿಜಯನಗರ ಘಟಕವನ್ನು ಮುಚ್ಚದೆ ಅನ್ಯ ಮಾರ್ಗವೇ ಇಲ್ಲ. ಇದರ ಪರಿಣಾಮ ಹಣದುಬ್ಬರದ ಮೇಲಾಗಲಿದೆ ಎಂದು ಜೆಎಸ್ ಡಬ್ಲ್ಯೂ ಉಪಾಧ್ಯಕ್ಷ ಮತ್ತು ಎಂಡಿ ಸಜ್ಜನ್ ಜಿಂದಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ-ಹರಾಜಿನ ಮುಖಾಂತರ ಅದಿರನ್ನು ಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ, ಇದೇ ಕಚ್ಚಾ ಉಕ್ಕು ಕೊಳ್ಳಲು ತಡೆಯಾಗಿದೆ. ಯಾವ ಉದ್ಯಮವೂ ಈ-ಹರಾಜಿನ ಮುಖಾಂತರ ಅದಿರನ್ನು ಪೂರೈಸಿಕೊಂಡು ಬದುಕಲು ಸಾಧ್ಯವಿಲ್ಲ ಎಂದು ಅವರು ಸಜ್ಜನ್ ನುಡಿದಿದ್ದಾರೆ.












Click it and Unblock the Notifications