'ಅಕ್ಟೋಬರ್ 3 ಏನಾಗುತ್ತೋ ದೇವರಿಗೇ ಗೊತ್ತು': ಯಡಿಯೂರಪ್ಪ

ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಂದು ನ್ಯಾಯಾಲಯದ ವಿಚಾರಣೆ ಮುಗಿದ ಮೇಲೆ, 8 ಅಥವಾ 10ನೇ ತಾರೀಖಿನ ನಂತರ ಬೀದರ್, ಗುಲ್ಬರ್ಗ ಕಡೆಯಿಂದ ರಾಜ್ಯ ಪ್ರವಾಸ ಮಾಡುವುದಾಗಿ ಘೋಷಿಸಿದರು.
'ಹಸಿರು ಶಾಲು ಆನಂದದ ಸಂಕೇತ. ಅಧಿಕಾರ ಸ್ವೀಕರಿಸುವಾಗ ಅದನ್ನು ಹೊದ್ದು ಪ್ರಮಾಣವಚನ ಸ್ವೀಕರಿಸಿದೆ. ಅಧಿಕಾರ ಕಳೆದುಕೊಂಡ ನಂತರ ನನ್ನ ತವರು ಜಿಲ್ಲೆಗೆ ಬಂದ ಸಂದರ್ಭದಲ್ಲಿ ಇಲ್ಲಿನ ರೈತರು ಇಂದು ನನಗೆ ಹಸಿರು ಶಾಲು ಹೊದಿಸಿ ಸನ್ಮಾನ ಮಾಡಿರುವುದು ನನ್ನ ಹೋರಾಟದ ಕೆಚ್ಚನ್ನು ಹೆಚ್ಚು ಮಾಡಿದೆ' ಎಂದು ಗದ್ಗದಿತರಾಗಿ ನುಡಿದರು.
ಪಕ್ಷದ ಬಲಕ್ಕಿಂತ, ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ನನ್ನ ಪ್ರವಾಸ ನಡೆಯಲಿದೆ. ಈ ಕುರಿತು ರೈತ ಸಂಘದ ಮುಖಂಡರ ಜತೆ ಚರ್ಚೆ ನಡೆಸಿದ್ದೇನೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪ್ರವಾಸ ಮಾಡಲಿದ್ದೇನೆ ಎಂದರು.












Click it and Unblock the Notifications