ಅಕ್ರಮ ಆಸ್ತಿ ಗಳಿಸಿಲ್ಲ, ತನಿಖೆಗೆ ನಾನು ಸಿದ್ಧ

ರಾಜಕೀಯ ಪ್ರೇರಿತವಾಗಿ ಸುಳ್ಳುಸುಳ್ಳು ಆರೋಪಗಳನ್ನು ಹೊರೆಸಲಾಗಿದೆ. ತನಿಖೆ ನಡೆಸುವ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ.
ಲೋಕಾಯುಕ್ತದ ತನಿಖಾಧಿಕಾರಿಗಳಿಂದ ಕರೆ ಬಂದರೆ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ, ಅಗತ್ಯ ದಾಖಲೆಗಳನ್ನು ಒದಗಿಸುತ್ತೇನೆ ಎಂದು ಬಾಲಕೃಷ್ಣ ಹೇಳಿದ್ದಾರೆ.
ಕೆ.ಎ.ಎಸ್. ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಬಾಲಕೃಷ್ಣೇ ಗೌಡ ಅವರು ಆದಾಯ ಮೂಲಕ್ಕಿಂತ ಹೆಚ್ಚಾಗಿ, ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಗಳಿಸಿದ್ದಾರೆ ಎಂದು ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಮಾಜಿ ಉದ್ಯೋಗಿ ಬಾಲಕೃಷ್ಣ ಎಂಬುವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.[ದೂರಿನ ವಿವರ ಇಲ್ಲಿದೆ]
ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಅ.10ರೊಳಗೆ ವರದಿ ನೀಡುವಂತೆ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ.












Click it and Unblock the Notifications