ದಿಗ್ವಿಜಯ್ ಗಿದೆ ಉಗ್ರರ ನಿಕಟ ಸಂಪರ್ಕ: ಆರೆಸ್ಸೆಸ್

ಇದಕ್ಕೆ ಪ್ರತಿಕ್ರಯಿಸಿರುವ ದಿಗ್ವಿಜಯ್ ಸಿಂಗ್, ನಾನು ಯಾವುದೇ ತನಿಖೆಗೂ ಸಿದ್ಧ. ಇಂದ್ರೇಶ್ ಕುಮಾರ್ ಅವರು ಸಹ ಪಾಕಿಸ್ತಾನಾದ್ ಐಎಸ್ ಐ ಜೊತೆ ಸಂಪರ್ಕ ಇರುವ ಬಗ್ಗೆ ತನಿಖೆಗೆ ಒಳಪಡಲಿ ಎಂದು ಗುಡುಗಿದ್ದಾರೆ.
2010ರ ಫೆಬ್ರವರಿಯಲ್ಲಿ ಬಾಟ್ಲಾ ಹೌಸ್ ಎನ್ ಕೌಂಟರ್ ಆರೋಪಿ ಮಹಮ್ಮದ್ ಸೈಫ್ ಭೇಟಿ ಮಾಡಿದ್ದ ದಿಗ್ವಿಜಯ್ ಸಿಂಗ್ ಅವರ ಉದ್ದೇಶ ಏನಾಗಿತ್ತು ಎಂದು ಇಂದ್ರೇಶ್ ಪ್ರಶ್ನಿಸಿದ್ದಾರೆ.
ದಿಗ್ವಿಜಯ್ ತನಿಖೆಗೆ ಒಳಪಟ್ಟರೆ ಅಗತ್ಯ ದಾಖಲೆ ಒದಗಿಸುವುದಾಗಿ ಇಂದ್ರೇಶ್ ಹೇಳಿದ್ದಾರೆ. ಆದರ, ಸಿಬಿಐ ವಿರುದ್ಧವೇ ಬಿಜೆಪಿ ಆರೋಪ ಹೊರೆಸುತ್ತಿರುವುದರಿಂದ ದಿಗ್ವಿಜಯ್ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಇಂದ್ರೇಶ್ ಉತ್ತರಿಸದೇ ನುಣುಚಿಕೊಂಡರು.
ಚಿದು ಜೈಲಿಗೆ ಹೋಗಲಿ: ಜನ ಲೋಕಪಾಲ ಮಸೂದೆ ಜಾರಿಗೆ ಬಂದಿದ್ದರೆ, ಚಿದಂಬರಂ ಈ ವೇಳೆಗೆ ಜೈಲಿನಲ್ಲಿರುತ್ತಿದ್ದರು. ಭ್ರಷ್ಟಾಚಾರಕ್ಕೆ ಬೆಂಬಲ ನೀಡುವುದೂ ಅಪರಾಧ, ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ ಎಂದು ಇಂದ್ರೇಶ್ ಹೇಳಿದರು.











Click it and Unblock the Notifications