ಚಿದಂಬರಂ ಅಖಂಡ ಬೆಂಬಲಕ್ಕೆ ನಿಂತ ಸೋನಿಯಾ ಮೇಡಂ

sonia-on-chidambaram-2g-party-to-back-pc
ನವದೆಹಲಿ, ಸೆ.24 : ಹಣಕಾಸು ಸಚಿವ ಪ್ರಣವ್‌ ಮುಖರ್ಜಿ ಮತ್ತು ಗೃಹ ಸಚಿವ ಪಿ. ಚಿದಂಬರಂ ನಡುವೆ ತಲೆದೋರಿರುವ ಮನಸ್ತಾಪವನ್ನು ಬಗೆಹರಿಸಲು ಸೋನಿಯಾ ಗಾಂಧಿ ಸ್ವತಃ ಮಧ್ಯಪ್ರವೇಶಿಸಿದ್ದು, 2ಜಿ ಸ್ಪೆಕ್ಟ್ರಂ ಸಂಕಷ್ಟದಲ್ಲಿರುವ ಚಿದುವನ್ನು ಸಾಧ್ಯವಾದಷ್ಟು ಸಮರ್ಥಿಸಬೇಕೆಂದು ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಸಮೇತ ಎಲ್ಲ ಪ್ರಮುಖ ನಾಯಕರಿಗೆ ಹಾಗೂ ಸರಕಾರಕ್ಕೆ ಸೂಚಿಸಿದ್ದಾರೆಂದು ಈ ಮೂಲಗಳು ತಿಳಿಸಿವೆ.

ಚಿದಂಬರಂ ಹಣಕಾಸು ಸಚಿವರಾಗಿದ್ದ ವೇಳೆ 2ಜಿ ಸ್ಪೆಕ್ಟ್ರಂ ಲೈಸೆನ್ಸ್‌ಗಳನ್ನು ಹರಾಜು ಹಾಕಲು ಪಟ್ಟು ಹಿಡಿಯದಿದ್ದರೆ ದೇಶದ ಬೊಕ್ಕಸಕ್ಕೆ ಭಾರೀ ಪ್ರಮಾಣದ ನಷ್ಟ ಸಂಭವಿಸುತ್ತಿರಲಿಲ್ಲ ಎಂದಿರುವ ರಹಸ್ಯ ಟಿಪ್ಪಣಿಯೊಂದನ್ನು ಪ್ರಣವ್‌ ಮುಖರ್ಜಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳೆದ ಮಾರ್ಚ್‌ನಲ್ಲಿ ಕಳುಹಿಸಿದ ಸಂಗತಿ ಆರ್ ಟಿಐ ಪ್ರಶ್ನೆಯೊಂದರ ಮೂಲಕ ಬಹಿರಂಗವಾದ ಬಳಿಕ ಹಗರಣ ಚಿದು ಕೊರಳಿಗೆ ಸುತ್ತಿಕೊಂಡಿದೆ.

ಸರಕಾರದ ಎರಡು ಉನ್ನತ ಸ್ಥಾನಗಳಲ್ಲಿರುವ ಸಚಿವರ ನಡುವೆ ಮನಸ್ತಾಪ ತಲೆದೋರಿರುವ ವರದಿಯಿಂದ ಕಾಂಗ್ರೆಸ್‌ ವರ್ಚಸ್ಸಿಗೆ ಹಾನಿಯಾಗಿದೆ. ಇದನ್ನು ಸರಿಪಡಿಸಲು ಮುಂದಾಗಿರುವ ಸೋನಿಯಾ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೊಳಪಟ್ಟು ವಿಶ್ರಾಂತಿ ಪಡೆಯುತ್ತಿರುವುದನ್ನೂ ಲೆಕ್ಕಿಸದೆ ರಂಗಕ್ಕೆ ಧುಮುಕಿದ್ದಾರೆ ಎನ್ನಲಾಗುತ್ತಿದೆ.

ವಿಪಕ್ಷಗಳು ಚಿದು ರಾಜೀನಾಮೆ ಅಥವ ವಜಾಕ್ಕೆ ಬಲವಾದ ಒತ್ತಾಯ ಮಂಡಿಸಿರುವಂತೆ ಮನಮೋಹನ್‌ ಸಿಂಗ್‌ ಮತ್ತು ಕಾಂಗ್ರೆಸ್‌ ನಿನ್ನೆ ಅವರನ್ನು ಸಮರ್ಥಿಸಿ ಹೇಳಿಕೆ ನೀಡಿವೆ. ಇದರ ಹೊರತಾಗಿಯೂ ಯಾವುದೇ ಕಾರಣಕ್ಕೆ ಚಿದು ಕೈಬಿಡಬಾರದೆಂದು ಸೋನಿಯಾ ಸೂಚಿಸಿರುವುದಾಗಿ ಮೂಲಗಳು ಹೇಳುತ್ತಿವೆ.

ಹಾಗೆಂದು ಮುಖರ್ಜಿ ಮತ್ತು ಚಿದು ನಡುವೆ ಶೀತಲ ಯುದ್ಧ ನಡೆಯುತ್ತಿರುವುದು ಇದೇ ಮೊದಲಲ್ಲ. ಎರಡು ವರ್ಷದ ಹಿಂದೆಯೇ ಆ ಬಗ್ಗೆ ಗುಸುಗುಸು ಕೇಳಿ ಬರುತ್ತಿತ್ತು. ಆಗಾಗ ಸೋನಿಯಾ ಮತ್ತು ಮನಮೋಹನ್‌ ಸಿಂಗ್‌ ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಿಸುತ್ತಿದ್ದರು. ಆದರೆ ಈ ಸಲ ಮಾತ್ರ ಅದು ಭುಗಿಲೆದ್ದಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+