ಕೋರ್ಟಿನಲ್ಲೇ ಬೆತ್ತಲಾದ ಖೈದಿ

ಸುಂದರ್ ಎನ್ನುವ 27 ವರ್ಷದ ವಿಚಾರಣಾಧೀನ ಖೈದಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ವಿಚಾರಣೆಯ ವೇಳೆ ತನಗೆ ಆರೋಪ ಪಟ್ಟಿಯ ಜೆರಾಕ್ಸ್ ಬೇಕೆಂದು ಹಠ ಹಿಡಿದ. ಆದರೆ ಆರೋಪಪಟ್ಟಿಯ ಪ್ರತಿಯನ್ನು ಮುಂದಿನ ವಿಚಾರಣೆಯ ಸಮಯದಲ್ಲಿ ನೀಡಲಾಗುವುದು ಎಂದು ಜಡ್ಜ್ ಹೇಳುತ್ತಿದ್ದಂತೆ ಸಿಟ್ಟಿಗೆದ್ದ ಸುಂದರ್ ಯಾರು ಇದ್ದಾರೆ ಇಲ್ಲ ಎಂದು ನೋಡದೆ ಎಲ್ಲರ ಮುಂದೆ ಬೆತ್ತಲಾಗಿ ಬಿಟ್ಟ.
ಕೋರ್ಟ್ ನಲ್ಲಿದ್ದ ಪುರುಷ ಮತ್ತು ಮಹಿಳಾ ಸಿಬಂದಿಗಳು ಒಂದು ಕ್ಷಣ ಅವಕ್ಕಾದರು. ಕೂಡಲೇ ಎಂಟ್ರಿ ಕೊಟ್ಟ ಪೊಲೀಸರು ಕೋರ್ಟ್ ನಿಂದ ಆತನನ್ನು ಎಳೆದು ಹೊರಗೆ ಕರೆದು ಕೊಂಡು ಹೋಗಿ ಬಟ್ಟೆ ಹಾಕಿಸುವಷ್ಟರಲ್ಲಿ ಹೈರಾಣವಾಗಿದ್ದರು.
ಅಷ್ಟೇ ಅಲ್ಲದೆ ಈ ಪುಣ್ಯಾತ್ಮ ಕೋರ್ಟ್ ನಿಂದ ವಾಪಾಸ್ ಕರೆದುಕೊಂಡು ಹೋಗುವಾಗಲೂ ಸುಮ್ಮಿರದೆ ಕೋರ್ಟ್ ಆವರಣದಲ್ಲಿದ್ದ ಕಾರಿನ ಕಿಟಕಿ ಬಾಗಿಲನ್ನು ಒಡೆದು ಹಾಕಿ ರಾದ್ದಾಂತ ಎಬ್ಬಿಸಿದ್ದ. ಪೊಲೀಸರು ಬಿಡ್ತಾರ.. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಪಡಿಸಿದ್ದಕ್ಕಾಗಿ ಇನ್ನೊಂದು ಕೇಸ್ ಆತನ ಮೇಲೆ ಗುಜರಾಯಿಸಿದ್ದಾರೆ. ಅದಕ್ಕೆ ಏನೋ ಹೇಳೋದು ಸುಮ್ಮನಿರಲಾರದೆ ಇರುವೆ ಬಿಟ್ಟು ಕೊಂಡಾ ಅಂತ..












Click it and Unblock the Notifications