ಅಕ್ರಮ ಗಣಿವೀರ ರೆಡ್ಡಿ ಮೇಲೆ ಬಿತ್ತು ಮತ್ತೊಂದು ಕೇಸು

cbi-to-investigate-reddy-amc-illegal-minig-karnataka
ನವದೆಹಲಿ, ಸೆ.24 : ಬಳ್ಳಾರಿ ಹಾಗೂ ಅನಂತಪುರ ಜಿಲ್ಲೆಗಳಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ತನಿಖೆಗೆ ಒಳಪಡಿಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ಈಗಾಗಲೇ ಆಂಧ್ರ ಸಿಬಿಐ ಕೈಗೆ ಸಿಕ್ಕಿ ಹೈರಾಣಗೊಂಡಿರುವ ರೆಡ್ಡಿಗಳಿಗೆ ಅಕ್ರಮ ಗಣಿಗಾರಿಕೆ ಪೆಡಂಭೂತವಾಗಿ ಕಾಡತೊಡಗಿದೆ.

ರೆಡ್ಡಿ ಸಹೋದರರ ಎಎಂಸಿ ಕಂಪನಿಯು ಸರಣಿ ಅಕ್ರಮಗಳಲ್ಲಿ ಭಾಗಿಯಾಗಿದೆ. ಜನಾರ್ದನ ರೆಡ್ಡಿ ದಂಪತಿ ಅಕ್ರಮವಾಗಿ ಎಎಂಸಿ ಪಾಲುದಾರರಾಗಿ ಸೇರಿಕೊಂಡು ಮೂಲ ಪಾಲುದಾರರನ್ನು ನಿವೃತ್ತಿಗೊಳಿಸಿದ್ದಾರೆ ಎನ್ನುವುದನ್ನೂ ಸಿಇಸಿ ವರದಿಯಲ್ಲಿ ತಿಳಿಸಿದೆ.

ಅಸೋಸಿಯೆಟೆಡ್ ಕಂಪನಿ ಮತ್ತು ಎಸ್.ಎಂ ಜೈನ್ ಮಾಲೀಕತ್ವದ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಗಣಿ ಕಂಪನಿಗಳು ಬಳ್ಳಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಎಸಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸಾಮಾಜಿಕ ಪರಿವರ್ತನಾ ಸಮಿತಿ ಪರ ನ್ಯಾಯವಾದಿ ಪ್ರಶಾಂತ್ ಭೂಷಣ್ ಸಲ್ಲಿಸಿದ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದೆ. ರಾಜ್ಯದ ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಅನಂತಪುರಗಳ ಗಣಿ ಚಟುವಟಿಕೆಗಳಿಗಿರುವ ಸಂಬಂಧದ ಬಗ್ಗೆ ತನಿಖೆ ನಡೆಸುವ ಕುರಿತು ಸಿಬಿಐ ಇಂದು ಕೋರ್ಟಿಗೆ ತನ್ನ ಪ್ರತಿಕ್ರಿಯೆ ನೀಡಲಿದೆ.

ಬಂಧಿತ ರೆಡ್ಡಿ ಸಹೋದರರ ಮಾಲಕತ್ವದ ಓಬಳಾಪುರಂ ಗಣಿ ಸಂಸ್ಥೆಯ ಕುರಿತಂತೆ ಸಿಬಿಐ ಇದುವರೆಗೆ ಕೈಗೊಂಡಿರುವ ತನಿಖೆಯ ವಸ್ತುಸ್ಥಿತಿ ಮಾಹಿತಿಯ ವರದಿ ನೀಡುವಂತೆಯೂ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ಅವರನ್ನು ಒಳಗೊಂಡ ಅರಣ್ಯ ಪೀಠ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+