ನರೇಂದ್ರ ಮೋದಿಗೆ ಬಿಟಿ ರುದ್ರೇಶ್ ಸನ್ಮಾನ

Posted By:
Subscribe to Oneindia Kannada
BT Rudresh felicitates Narendra Modi
ಅಹ್ಮದಾಬಾದ್, ಸೆ. 22 : ಶಾಂತಿ ಮತ್ತು ಸೌಹಾರ್ದತೆಗಾಗಿ ಮೂರು ದಿನಗಳ 'ಸದ್ಭಾವನಾ ಉಪವಾಸ' ನಿರಶನ ಕೈಗೊಂಡಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕರ್ನಾಟಕದ ಖ್ಯಾತ ಹೋಮಿಯೋಪತಿ ತಜ್ಞ ಡಾ. ಬಿ.ಟಿ. ರುದ್ರೇಶ್ ಅವರು ಗುರುವಾರ ಸನ್ಮಾನಿಸಿದರು.

ನರೇಂದ್ರ ಮೋದಿ ಅವರು ಕೈಗೊಂಡಿದ್ದ ಸದ್ಭಾವನಾ ಉಪವಾಸ ಇಡೀ ದೇಶವನ್ನು ಸೆಳೆದಿತ್ತು. ಎಲ್ ಕೆ ಅಡ್ವಾಣಿ ಸೇರಿದಂತೆ ಹಿರಿಯ ಬಿಜೆಪಿ ರಾಜಕಾರಣಿಗಳು ಮಾತ್ರವಲ್ಲ ಸರ್ವಧರ್ಮೀಯರು ಕೂಡ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿ ಅಶ್ವಿನಿ ಹೋಮಿಯೋ ಕ್ಲಿನಿಕ್ ಹೊಂದಿರುವ, ಕರ್ನಾಟಕ ನಾಲೇಜ್ ಕಮಿಷನ್ ಸದಸ್ಯರಾಗಿರುವ ಡಾ. ಬಿ.ಟಿ. ರುದ್ರೇಶ್ ಅವರು ನರೇಂದ್ರ ಮೋದಿ ಅವರಿಗೆ ಮೈಸೂರು ಪೈಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನಕ್ಕೆ ಬರಬೇಕೆಂದು ಅವರನ್ನು ಆಹ್ವಾನಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Noted homeopathy doctor Dr. B.T.Rudresh felicitates Gujarat Chief Minister Narendra Modi on Sept 22 for initiating Sadbhavana mission for Peace & Harmony. He invited Narendra Modi for national seminar to be held in November in Bangalore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ