ಬ್ರಹ್ಮಣಿಗೆ ನೀರು ಹರಿಸಿದ ಉಕ್ಕು ಬ್ರಹ್ಮ ಸಿಂಗ್

BN Singh brain behind Brahmani Steels
ಕಡಪ, ಸೆ.22: ಬ್ರಹ್ಮಿಣಿಗೆ ಜಲ ಸಂಪತ್ತು ಹರಿದು ಬರುವಂತೆ ಮಾಡಿದ್ದೇ ಉಕ್ಕು ತಜ್ಞ ಬಿಎನ್ ಸಿಂಗ್. ಆಗ ಶುರುವಾದದ್ದೇ 210 MW ಸಾಮಾರಥ್ಯದ ರಾಯಲಸೀಮಾ ಥರ್ಮಲ್ ಪವರ್ ಪ್ರಾಜೆಕ್ಟ್(RTPS) ಎರಡನೇ ಘಟಕದ ವಿಸ್ತರಣೆ.

ಕಡಪದಲ್ಲಿದ್ದ ರೆಡ್ಡಿ ಕಂಪನಿಗೆ ನೀರು ಒದಗಿಸಲು ಅಂದಿನ ಆಂಧ್ರ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಸೃಷ್ಟಿಸಿದ ತ್ವರಿತ ಯೋಜನೆ.

ಮೈಲಾವರಂ ಜಲಾಗಾರದಿಂದ 1.30 ಟಿಎಂಸಿ ನೀರು ಹಾಗೂ ಶ್ರೀ ಪೊಟ್ಲೂರಿ ವೀರಬ್ರಹ್ಮೇಂದ್ರ ಸ್ವಾಮಿ ಜಲಾಗಾರದಿಂದ 2 ಟಿಎಂಸಿ ನೀರು ಆರ್ ಟಿಪಿಎಸ್ ಗೆ ತಲುಪುತ್ತಿತ್ತು. ಇದಲ್ಲವೂ ಬ್ರಹ್ಮಿಣಿ ಬಾಯಿಗೆ ಬೀಳುತ್ತಿತ್ತು. ಇದಲ್ಲದೆ ಗಂಡಿಕೊಟ ಜಲಾಗಾರದಿಂದ 2 ಟಿಎಂಸಿ ನೀರು ಬ್ರಹ್ಮಿಣಿ ಸ್ಟೀಲ್ಸ್ ಕಡೆಗೆ ಹರಿದು ಬರುತ್ತಿತ್ತು.

ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿ ಕೂಡಾ ಬ್ರಹ್ಮಿಣಿ ಸಂಸ್ಥೆಯ ಪಾಲುದಾರರಾಗಿದ್ದು, ಈ ಯೋಜನೆ ಅವರ ಕಣ್ಗಾವಲಿನಲ್ಲೇ ನಡೆದಿರುವ ಬಗ್ಗೆ ಪ್ರತಿಪಕ್ಷದವರು ಅಸೆಂಬ್ಲಿಯಲ್ಲಿ ಕೂಗಾಡಿದ್ದರು. ಆಗ ಸಭಾಪತಿಯಾಗಿದ್ದು ಇಂದಿನ ಸಿಎಂ ಕಿರಣ್ ಕುಮಾರ್ ರೆಡ್ಡಿ.

ಅದರೆ, ಬ್ರಹ್ಮಿಣಿ ಸ್ಟೀಲ್ಸ್ ಗೆ ಜಲಮೂಲ, ರಫ್ತು ಮೂಲ, ಅದಿರು ಶೇಖರಣೆ ಮೂಲ, ಕಂಪನಿ ನಿರ್ವಹಣೆ ಮೂಲ ಹೇಳಿಕೊಟ್ಟ ಸಿಂಗ್ ಇನ್ನೂ ಸಿಬಿಐ ಕಣ್ಣಿಗೆ ಬಿದ್ದಿಲ್ಲ. ಬ್ರಹ್ಮಿಣಿ ಸ್ಟೀಲ್ಸ್ ನ ಪ್ರತಿ ಗ್ರಾಮ್ ಅದಿರಿನ ಜಾತಕ ಹೇಳಬಲ್ಲ ಸಿಂಗ್, ರೆಡ್ಡಿ ಗ್ಯಾಂಗ್ ನ ಪ್ರಮುಖ ವ್ಯಕ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+