ಕೇಸರಿ ಬಾವುಟವಿಲ್ಲದೆ ರಥವೇರಲಿರುವ ಹಿರಿ ಯೋಧ

LK Advani
ನವದೆಹಲಿ, ಸೆ.21: ಭ್ರಷ್ಟಾಚಾರ ವಿರುದ್ಧ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ರಥ ಏರುವ ಮುನ್ನವೇ ಕೀಲುನೋವು ಶುರುವಾಗಿದೆ. ಉದ್ದೇಶಿತ ಯಾತ್ರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರೋಧ ವ್ಯಕ್ತಪಡಿಸಿದೆ.

ಹಾಗಾಗಿ ಅ.11ರಂದು ಸಮಾಜವಾದಿ ನಾಯಕ ಜೈಪ್ರಕಾಶ್ ನಾರಾಯಣ್ ಅವರ ಹುಟ್ಟೂರಿನಲ್ಲಿ ಅಡ್ವಾಣಿ ಯಾತ್ರೆಯ ರಥಕ್ಕೆ ಕೇಸರಿ ಬಾವುಟ ಕಟ್ಟುವಂತಿಲ್ಲ. ಇದಲ್ಲದೆ ಲೋಕಸಭೆ ಚುನಾವಣೆ 2014ರ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೆ ಗುಟ್ಟು ಉಳಿಸಿಕೊಂಡಿರುವ ಬಿಜೆಪಿ ಕೂಡಾ ಅಡ್ವಾಣಿ ಯಾತ್ರೆಯಿಂದ ಇರುಸು ಮುರುಸುಗೊಂಡಿದೆ.

ಯಾವುದೇ ಸಂಕಲ್ಪ ಕೈಗೊಳ್ಳುವ ಮೊದಲು ಸಂಘ ಪರಿವಾರದೊಡನೆ ಚರ್ಚೆ ನಡೆಸುತ್ತಿದ್ದ ಅಡ್ವಾಣಿ ಅವರು ರಥ ಯಾತ್ರೆ ವಿಷಯದಲ್ಲಿ ಆತುರ ಪಟ್ಟಿರುವುದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ರನ್ನು ಕೆರಳಿಸಿದೆ.

ಅಡ್ವಾಣಿಗೆ ಮುಳುವಾದ ಅಂಶಗಳು: ಇದರ ಜೊತೆಗೆ ಇತ್ತೀಚೆಗೆ ಯಶಸ್ವಿಯಾಗಿ ಸಂಪನ್ನಗೊಂಡ ಗುಜರಾತ್ ಸಿಎಂ ಮೋದಿ ಅವರ 'ಸದ್ಭಾವನಾ ಉಪವಾಸ' ಕೂಡಾ ಅಡ್ವಾಣಿಗೆ ಮುಳುವಾಗಿ ಪರಿಣಮಿಸಿದೆ.

ಪ್ರಧಾನಿ ಹುದ್ದೆಗೆ ಯುವ ನೇತಾರರಿಗೆ ಆದ್ಯತೆ ನೀಡಲಾಗುವುದು ಎನ್ನುವ ಮೂಲಕ ಆರೆಸ್ಸೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೂ, ಎಲ್ ಕೆ ಅಡ್ವಾಣಿ ಮಾತ್ರ ಪ್ರಧಾನಿ ಹುದ್ದೆ ರೇಸ್ ನಿಂದ ಹಿಂದೆ ಸರಿದಿದ್ದೀನಿ ಎಂದು ಘೋಷಿಸಲು ಹಿಂದು ಮುಂದು ನೋಡುತ್ತಿದ್ದಾರೆ.

ರಥ ಯಾತ್ರೆ ಉದ್ದೇಶ ಭ್ರಷ್ಟಾಚಾರ ವಿರುದ್ಧ ಜನ ಜಾಗೃತಿ ಎಂದು ಅಡ್ವಾಣಿ ಹೇಳಿದರೂ ಅದನ್ನು ನಂಬಲು ಭಾಜಪವೇ ಸಿದ್ಧವಿಲ್ಲ.

ಗುಜರಾತ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹುಟ್ಟೂರಿನಿಂದ ರಥಯಾತ್ರೆ ಆರಂಭವಾಗುತ್ತದೆ ಎಂಬ ಸುದ್ದಿಯಿತ್ತು. ಜೊತೆಗೆ ಭ್ರಷ್ಟಾಚಾರದ ಆಗರವಾಗಿರುವ ಕರ್ನಾಟಕದ ಬಳ್ಳಾರಿ ಜಿಲ್ಲೆಯಿಂದ ರಥಯಾತ್ರೆ ಆರಂಭವಾಗಲಿ ಎಂಬ ಕೂಗು ಎದ್ದಿತ್ತು. ಆದರೆ, ಅಡ್ವಾಣಿ ಜೆಪಿ ಅವರ ಹುಟ್ಟೂರನ್ನೇ ಆಯ್ಕೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+