ರಾಜೀನಾಮೆ ಕೊಟ್ಟ ನ್ಯಾ. ಪಾಟೀಲರ ಶ್ಲಾಘಿಸಿದ ಎಚ್ಡಿಕೆ
ಬಳ್ಳಾರಿ,
ಸೆ. 21 : ನ್ಯಾ. ಶಿವರಾಜ್ ಪಾಟೀಲರು ಸೈಟು ಖರೀದಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಆರೋಪ ಬಂದ ಕೂಡಲೇ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿ ಮೇಲ್ಪಂಕ್ತಿ ಹಾಕಿಕೊಟ್ಟು ಆದರ್ಶರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಶ್ಲಾಘಿಸಿದ್ದಾರೆ. id="toptextpromo">ಹೊಸಪೇಟೆಯಲ್ಲಿ
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನನ್ನ ವಿರುದ್ಧ 150 ಕೋಟಿ ರುಪಾಯಿ ಗಣಿ ಲಂಚ ಆರೋಪ ಬಂದಾಗ ನನ್ನನ್ನು ಜೈಲಿಗೆ ಕಳುಹಿಸಲು ಕಾಂಗ್ರೆಸ್ಸಿಗರು ಒತ್ತಾಯಿಸಿದರು, ಹೋರಾಡಿದರು. ಅಕ್ರಮ - ಅನಧಿಕೃತ ಗಣಿಗಾರಿಕೆ ತಡೆಯಲು ಎಲ್ಲಿಯೂ ಮಾತನಾಡಲಿಲ್ಲ ಎಂದು ಆರೋಪಿಸಿದರು. id='are-slot-1' class='oiad oi-axt oiadv'> id='top-searched-articles'>ಕಾಂಗ್ರೆಸ್‌ನವರು
ನನ್ನನ್ನು ಕೆಣಕುತ್ತಿದ್ದಾರೆ. ಗಣಿ ವಿಚಾರದಲ್ಲಿ ಕಾಂಗ್ರೆಸ್ಸಿಗರು ಕೂಡ ಜೈಲು ಸೇರಲಿದ್ದಾರೆ. ದಾಖಲೆಗಳು ಇಲ್ಲದೇ ನಾನು ಯಾವುದೇ ಆರೋಪಗಳನ್ನು ಮಾಡುವುದಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಆದೇಶಿಸಿದ್ದೆ ಎಂದು ಅವರು ಹೇಳಿದರು.











Click it and Unblock the Notifications