ಸಿಬಿಐ ಕೋರ್ಟಿನಲ್ಲಿ ಅಳುಮುಂಜಿಯಾದ ಗಡ್ಡಧಾರಿ ರೆಡ್ಡಿ

unshaven-reddy-appears-in-hyderabad-cbi-court
ಹೈದರಾಬಾದ್, ಸೆ.20: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಯಾವತ್ತೂ ಶಿಸ್ತುಬದ್ಧ ವ್ಯಕ್ತಿ. ಅವರ ಉಡುಗೆ-ತೊಡುಗೆಯಲ್ಲಿ, ಹಾವಭಾವದಲ್ಲಿ ಯಾವತ್ತೂ ಶಿಸ್ತು ಇರುತ್ತದೆ. ಆದರೆ, ಜೈಲುಪಾಲಾದ ಚಿಂತೆಯಲ್ಲಿ ರೆಡ್ಡಿ ಶೇವ್‌ ಮಾಡುವುದನ್ನು ಬಿಟ್ಟಿದ್ದಾರೆ. ಅಂದರೆ ಅವರೀಗ ಗಡ್ಡ ಬಿಟ್ಟಿದ್ದಾರೆ. ರೆಡ್ಡಿ ಮುಖದಲ್ಲಿ ಕುರುಚಲು ಗಡ್ಡ ಪೊಗದಸ್ತಾಗಿ ಕಂಡುಬಂದಿದೆ. ಇದು ಹಲವರಿಗೆ ಸೋಜಿಗವಾಗಿದ್ದರೆ ಅವರ ಹಿತೈಷಿಗಳನ್ನು ಚಿಂತೆಗೀಡುಮಾಡಿದೆ.

ಇಂತಹ ಪರಿಸ್ಥಿತಿಯಲ್ಲಿ ನಿನ್ನೆ ಕೋರ್ಟ್ ಕಟೆಕಟೆಯಲ್ಲಿದ್ದ ಜನಾ ರೆಡ್ಡಿ ತೀರಾ ಬಳಲಿದಂತೆ ಕಂಡುಬಂದರು. ನ್ಯಾಯಾಧೀಶರು ರೆಡ್ಡಿಗೆ 'ಜೈಲಿಗೆ ನಡಿ' ಎನ್ನುತ್ತಿದ್ದಂತೆ ದುಃಖ ಉಮ್ಮಳಿಸಿಕೊಂಡು ಬಂದು ಅತ್ತೂ ಬಿಟ್ಟರು. ಅದಕ್ಕೂ ಮುನ್ನ ಒಬ್ಬರಾದ ಮೇಲೊಬ್ಬರಂತೆ ಹಿರಿಯ ವಕೀಲರುಗಳ ಕಾಲು ಮುಟ್ಟಿ ಜನಾ ರೆಡ್ಡಿ ನಮಸ್ಕರಿಸುತ್ತಿದ್ದುದೂ ಕಂಡು ಬಂತು.

ತನಿಖೆ ವೇಳೆ ರೆಡ್ಡಿ ಸಹಿಯಿರುವ ದಾಖಲೆ ಪತ್ರಗಳನ್ನು ಸಿಬಿಐ ಅಧಿಕಾರಿಗಳು ತೋರಿಸಿದಾಗ, 'ಅದು ನನ್ನ ಸಹಿಯೇನು? ಏನೋ, ಆ ರೀತಿ ನಾನು ಸಹಿ ಮಾಡಿರುವುದು ಜ್ಞಾಪಕಕ್ಕೆ ಬರುತ್ತಿಲ್ಲ' ಎಂದು ಜನಾ ಜಾಣ ಮರೆವು ಪ್ರದರ್ಶಿಸಿದ್ದಾರೆ. ಇನ್ನು ಹೆಚ್ಚು ವಿಚಾರಣೆಗೊಳಪಡಿಸಿದರೆ 'ನಾಕೇಮಿ ತೆಲಿಯ ಲೇದು' ಎಂದು ರೆಡ್ಡಿ ಸಿಬಿಐ ಎದುರು ವರಾತ ತೆಗೆದಿದ್ದಾರೆ.

ಇದರಿಂದ ಪೀಕಲಾಟಕ್ಕಿಟ್ಟುಕೊಂಡಿರುವ ಸಿಬಿಐ 'ಜನಾರನ್ನು ಇನ್ನಷ್ಟು ವಿಚಾರಣೆಗೊಳಪಡಿಸಬೇಕಾಗಿದೆ. ಇಬ್ಬರನ್ನೂ ಮತ್ತೆ 9 ದಿನಗಳ ಕಾಲ ತನ್ನ ವಶಕ್ಕೆ ನೀಡಬೇಕು' ಎಂದು ನ್ಯಾಯಾಲಯಕ್ಕೆ ಮೊರೆಯಿಟ್ಟಿದೆ. ಅದೊಮ್ಮೆ ತಮ್ಮ ಸುಪರ್ದಿಗೆ ಬರುತ್ತಿದ್ದಂತೆ ಮೊದಲು ಜನಾ ರೆಡ್ಡಿಯನ್ನು ಬಳ್ಳಾರಿಗೆ ಕರೆದೊಯ್ದು ಸ್ಥಳ ಮಹಾತ್ಮೆಯಿಂದ ಅವರ ಜ್ಞಾಪಕ ಶಕ್ತಿಯನ್ನು ಮರಳಿಸುವ ಯತ್ನ ನಡೆಸಲಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+