ಯಡಿಯೂರಪ್ಪ ಕುಟುಂಬದ ಮೇಲೆ ಲೋಕಾಯುಕ್ತ ದಾಳಿ

ಶೇಷಾದ್ರಿಪುರಂನಲ್ಲಿರುವ ಧವಳಗಿರಿ ಪ್ರಾಪರ್ಟಿಸ್, ವಿಜಯನಗರದಲ್ಲಿರುವ ಯಡಿಯೂರಪ್ಪ ಅವರ ಅಳಿಯ ಸೋಹನ್ ಕುಮಾರ್ ಅವರ ಮನೆ, ಸಹ್ಯಾದ್ರಿ ಹೆಲ್ತ್ ಕೇರ್ ಸಂಸ್ಥೆ ಕಚೇರಿ ಮೇಲೆ ದಾಳಿ ನಡೆಸಿ, ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ ಪಿ ಮಂಜುನಾಥ್ ಅವರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ದಾಳಿ ಮುಂದುವರೆದಿದ್ದು, ಯಡಿಯೂರಪ್ಪ ಆಪ್ತ ಹೇಮಚಂದ್ರ ಸಾಗರ್ ಅವರ ಮನೆ, ಕಚೇರಿ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ನಂಗೆ ಮೊದಲೇ ಗೊತ್ತಿತ್ತು: ಕೊಪ್ಪಳ ಉಪಚುನಾವಣೆ ಪ್ರಚಾರದ ಬಿಸಿಯಲ್ಲಿರುವ ಯಡಿಯೂರಪ್ಪ ಅವರು ಲೋಕಾಯುಕ್ತ ದಾಳಿಗೆ ಪ್ರತಿಕ್ರಿಯಿಸುತ್ತಾ, 'ನಂಗೆ ದಾಳಿ ನಡೆಯುತ್ತೆ ಎಂದು ನಿನ್ನೆ ದಿವಸವೇ ಗೊತ್ತಾಗಿತ್ತು' ಎಂದು ಹೇಳಿದ್ದಾರೆ.












Click it and Unblock the Notifications