ಎಸ್‌ಎಂಎಸ್ ಗಿರಾಕಿ, ಮಹಿಳಾಪೀಡಕ ಕೇರಳ ಸಚಿವನಿಗೆ ಸಮನ್ಸ್

ಈ ಸಂಬಂಧ ಅಕ್ಟೋಬರ್ 22 ರಂದು ಕೋರ್ಟ್‌ಗೆ ಹಾಜರಾಗುವಂತೆ ಇಡುಕ್ಕಿ ಜಿಲ್ಲೆಯ ತೊಡುಪುಲದ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ರವಿ ಚಂದ್ ಅವರು ಜೋಸೆಫ್‌ಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಕೆಲ ತಿಂಗಳುಗಳಿಂದ ಜೋಸೆಫ್‌ರಿಂದ ತಾನು ಖಾಲಿ ಸಂದೇಶವನ್ನು ಪದೇ ಪದೆ ಸ್ವೀಕರಿಸುತ್ತಿರುವುದಾಗಿ ಮಹಿಳೆಯೊರ್ವರು ನೀಡಿದ ದೂರು ಮತ್ತು ಸಾಕ್ಷಿಗಳ ಆಧಾರದ ಮೇಲೆ ನ್ಯಾಯಾಧೀಶರು ಸ್ವಯಂ ಅಧಿಕಾರ ಬಳಸಿ ಜಲ ಸಂಪನ್ಮೂಲ ಸಚಿವ ಜೋಸೆಫ್ ವಿರುದ್ಧ ಸೈಬರ್ ಪ್ರಕರಣ ದಾಖಲಿಸಿದ್ದಾರೆ.
ಎಲ್‌ಡಿಎಫ್‌ನ ಅಚ್ಯುತಾನಂದನ್ ಸಂಪುಟದಲ್ಲಿ ಜೋಸೆಫ್ ಸಚಿವರಾಗಿದ್ದಾಗ ಚೆನ್ನೈ-ಕೊಚ್ಚಿ ವಿಮಾನದಲ್ಲಿ ಸಹ ಮಹಿಳಾ ಪ್ರಯಾಣಿಕರೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಕಳೆದ ವರ್ಷ ಕೇರಳ ಕಾಂಗ್ರೆಸ್ ಸೇರಿದ್ದ ಜೋಸೆಫ್ ಮತ್ತೆ ಸಚಿವರಾಗಿ ಅಧಿಕಾರ ಹೊಂದಿದ್ದಾರೆ.












Click it and Unblock the Notifications