ಈಗ ಉಪವಾಸ ಮಾಡುವ ಸರದಿ ಶ್ರೀರಾಮುಲು ಅವರದು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಗ್ಗಿಂಗ್ ಗಣಿಗಾರಿಕೆ ನಡೆಯಬೇಕು. ಕೃಷಿ ಭೂಮಿಯಲ್ಲಿ ಮೂರು ಅಡಿ ಮೇಲ್ಪದರದಲ್ಲಿ ಕಬ್ಬಿಣದ ಅದಿರನ್ನು ತೆಗೆಯಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದರು. ಪತ್ರಿಕಾಗೋಷ್ಠಿಯ ನಂತರ ಪ್ರತಿಭಟನಾ ಸ್ಥಳಕ್ಕೆ ಹೋಗಿ ಬೆಂಬಲ ವ್ಯಕ್ತಪಡಿಸಿದ್ದರು.
ಭಾನುವಾರ ಕೂಡ ಬೆಳಗ್ಗೆ ಹೋಗಿ ಬೆಂಬಲ ವ್ಯಕ್ತಪಡಿಸಿ ಮನೆಗೆ ಹಿಂದಿರುಗಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರತಿಭಟನಾ ಸ್ಥಳಕ್ಕೆ ಪುನಃ ತೆರಳಿದ ಶ್ರೀರಾಮುಲು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಣೆ ಮಾಡಿ, ಸತ್ಯಾಗ್ರಹ ಪ್ರಾರಂಭಿಸಿಯೇಬಿಟ್ಟರು.
ಮಾಜಿ ಆರೋಗ್ಯ ಸಚಿವರಿಗೆ ಲೋ ಬಿಪಿ : ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಡಾ. ಬಸಿರೆಡ್ಡಿ ಅವರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸಂಜೆ 6 ಗಂಟೆಗೆ ನಡೆಸಿದ ಆರೋಗ್ಯ ತಪಾಸಣೆಯಲ್ಲಿ ಲೋ ಬಿಪಿ, ಲೋ ಶುಗರ್ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ವರ್ಷ ಸಿದ್ದರಾಮಯ್ಯ ಅವರು ಬಳ್ಳಾರಿವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದ ಸಮಯದಲ್ಲಿ ಶ್ರೀರಾಮುಲು ಅವರು ಕೇಶಮುಂಡನ ಮಾಡಿಸಿಕೊಂಡು, ಕಪ್ಪುಬಟ್ಟೆ ಧರಿಸಿ ಒಂದು ವಾರ ಕಾಲ ಕೇವಲ ಕಾಳುಕಡಿ ತಿನ್ನುವ 'ಉಪವಾಸ' ಆಚರಿಸಿದ್ದರು.












Click it and Unblock the Notifications