ಸಿಬಿಐನಿಂದ ನನಗೆ ಕರೆ ಬಂದಿಲ್ಲ: ಶ್ರೀರಾಮುಲು

ಬಳ್ಳಾರಿ, ಸೆ.17: ನಾನು ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ, ರಾಜೀನಾಮೆಗೆ ಕಾರಣವನ್ನು ಸ್ಪೀಕರ್ ಗೆ ಸ್ಪಷ್ಟೀಕರಿಸಿದ್ದೇನೆ. ನಾನು ನಾಪತ್ತೆಯಾಗಿಲ್ಲ ಮಾಧ್ಯಮಗಳು ಗಮನಿಸಬೇಕು, ಸಿಬಿಐ ಕರೆ ನನಗೆ ಬಂದಿಲ್ಲ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಾನು ನಾಪತ್ತೆಯಾಗಿಲ್ಲ: ಜನರ ಜೊತೆ ಬೆಳೆದವನು ನಾನು, ಜನರ ಮಧ್ಯೆ ಇರ್ತೇನೆ. ನನ್ನ ಗೆಳೆಯ ಜನಾರ್ದನ ರೆಡ್ಡಿ ಕೇವಲ ಅರೋಪಿ, ಅಪರಾಧಿಯಲ್ಲ, ಸಿಬಿಐನಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಸಿಬಿಐ ಕರೆ ಬಂದರೆ ಸಂಪೂರ್ಣ ಸಹಕಾರ ನೀಡುವೆ.

ರೆಡ್ಡಿ ಅವರಿಗೆ ವಿಚಾರಣೆ ಸಂದರ್ಭದಲ್ಲಿ ಕನಿಷ್ಠ ಸೌಲಭ್ಯ ನೀಡಲಿ ಸಿಬಿಐಗೆ ಮನವಿ ಮಾಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.

ರೈತರನ್ನು ಉಳಿಸಿ, ಗಣಿಗಾರಿಕೆಗೆ ಅನುಮತಿ ನೀಡಿ: ಲಕ್ಷಾಂತರ ಜನರ ಜೀವನದ ಹಕ್ಕನ್ನು ಕಿತ್ತುಕೊಂಡ ಕಾಂಗ್ರೆಸ್, ಜನಾರ್ದನ ರೆಡ್ಡಿ ಏಳಿಗೆ ಸಹಿಸದವರಿಂದ ಈ ಕೃತ್ಯ.

* ಗಣಿಗಾರಿಕೆ ನಿಷೇಧದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 5 ಲಕ್ಷ ಜನ ಗಣಿಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಕ್ರಮ ಗಣಿಗಾರಿಕೆ ಅನುಮತಿ ನೀಡಬೇಕು.
* ಒಂದು ಕಡೆ ಪರಿಸರವನ್ನು ಕಾಪಾಡುಕೊಬೇಕು. 100 ಎಕರೆ ಪರ್ಮಿಷನ್ ಕೊಡಿ. 200 ಎಕರೆ ಪರಿಸರ ಬೆಳೆಸಿ.
* ಕಾನೂನುಬದ್ಧವಾಗಿ ಡಿಗ್ಗಿಂಗ್ ಗಣಿಗಾರಿಕೆಗೆ ಅನುಮತಿ ನೀಡಿ ಜನರು ಬೀದಿಪಾಲಾಗುವುದನ್ನು ತಪ್ಪಿಸಿ.
* ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕನಾಗಿ 52 ಸ್ಪಾಂಜ್ ಐರನ್ ಕಂಪನಿಗಳಿವೆ. ಕೋಟಿಗಟ್ಟಲೆ ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಈ ಕಂಪನಿಗಳು ಮುಚ್ಚಿದರೆ ಜನರು ಸಾಯುತ್ತಾರೆ.
* ನಾನು ರಾಜೀನಾಮೆ ಕೊಟ್ಟಿದ್ದು ನಾಟಕ ಅಲ್ಲ. ರಾಜೀನಾಮೆ ನೀಡಲು ಯಾರೂ ಒತ್ತಡ ಹೇರಿಲ್ಲ. ನಾನು ಎಂದಿಗೂ ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+