ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಮುಂದೆ ಕಾರು ನಿಲ್ಲಿಸಿದರೆ 600 ರು ಟ್ಯಾಕ್ಸ್

By Mahesh
|
Google Oneindia Kannada News

Car Parking Tax, Bangalore
ಬೆಂಗಳೂರು, ಸೆ. 17: ರಾಜಧಾನಿಯ ಕಾರು ಮಾಲೀಕರಿಗೆ ಬಿಬಿಎಂಪಿ ಶನಿವಾರ (ಸೆ.17)ದಂದು ಸಣ್ಣದೊಂದು ಶಾಕ್ ನೀಡಿದೆ. ಮನೆ ಮುಂದೆ ರಸ್ತೆಯಲ್ಲಿ ಕಾರು ನಿಲ್ಲಿಸಿದರೆ 600 ರು ತೆರಿಗೆ ವಸೂಲಿ ಮಾಡುವುದಾಗಿ ಹೇಳಿದೆ.

ಕೊರತೆ ಅನುಭವಿಸುತ್ತಿರುವ ಬಿಬಿಎಂಪಿ ಬೊಕ್ಕಸವನ್ನು ತುಂಬಿಸಲು ಅನಗತ್ಯವಾಗಿ ನಾಗರೀಕರ ಮೇಲೆ ತೆರಿಗೆಗಳನ್ನು ಹೇರಿ ನಿಧಿ ಸಂಗ್ರಹ ಕಾರ್ಯಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

ಬೆಂಗಳೂರು ನಗರ ಮೊದಲೇ ಪಾರ್ಕಿಂಗ್ ಪ್ರಾಬ್ಲಂನಿಂದ ಒದ್ದಾಡುತ್ತಿದೆ. ಪಾರ್ಕಿಂಗ್ ಸಮಸ್ಯೆ ಪರಿಹಾರ ನೀಡುವ ಬದಲು ಮನೆ ಮುಂದೆ ವೆಹಿಕಲ್ ನಿಲ್ಲಿಸಿದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತೆ ಎಂದು ಬಿಬಿಎಂಪಿ ಎಚ್ಚರಿಸುತ್ತಿದೆ.

ಹದಗೆಟ್ಟ ರಸ್ತೆಗಳು: ಒಂದು ಕಡೆ ಚಂದ್ರನ ಮೇಲ್ಮೆ ಹೋಲುವ ಗುಳಿ ಬಿದ್ದ ಹೊಂಡಗಳಿಗೆ ಡಾಂಬರು ಬಳಿದು ಇದೇ ಹೈಕ್ಲಾಸ್ ರಸ್ತೆ ಎನ್ನುವ ಸರ್ಕಾರ, ರಸ್ತೆ ದುರಸ್ತಿ ನೆಪದಲ್ಲಿ ಕಿತ್ತೋಗಿರೋ ರಸ್ತೆ ಮೇಲೆ ಬಿಸಿ ಟಾರು ಸುರಿದು ತೇಪೆ ಹಚ್ಚುತ್ತಿದೆ.ಈಗ ನೋಡಿದರೆ ಪಾರ್ಕಿಂಗ್ ಮೇಲೆ ಬಿಬಿಎಂಪಿ ಕಣ್ಣು ಬಿದ್ದಿದೆ.

ಟ್ಯಾಕ್ಸ್ ಏಕೆ?: ಮನೆ ಮುಂದೆ ಗಾಡಿ ನಿಲ್ಲಿಸುವುದರಿಂದ ರಾತ್ರಿ ವೇಳೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಐಟಿ ಕಂಪನಿ ಕಚೇರಿಗಳಿಂದ ಬರುವ ಕ್ಯಾಬ್ ಗಳು ಹಲವು ಬಾರಿ ಈ ಕಿರಿಕಿರಿ ಅನುಭವಿಸಿ, ನಮಗೆ ದೂರು ನೀಡಿದ್ದಾರೆ.

ಹಾಗಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಸೋಮವಾರ ಸಾರಿಗೆ ಸಚಿವ ಆರ್ ಅಶೋಕ್ ಅಧ್ಯಕ್ಷತೆಯಲ್ಲಿ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಮೂಲಗಳಿಂದ ತಿಳಿದು ಬಂದಿದೆ.

ಆಸ್ತಿ ತೆರಿಗೆ ಸಂಗ್ರಹದಲ್ಲಿ ವೈಫಲ್ಯ ಕಂಡಿರುವ ಬಿಬಿಎಂಪಿ ಈಗ ಪಾರ್ಕಿಂಗ್ ತೆರಿಗೆಯ ನಿರ್ಧಾರಕ್ಕೆ ಇಳಿದಿದೆ.

English summary
Bruhat Bengaluru Maha nagara Palike(BBMP) likely to impose parking tax of Rs 600 on car owners parking their vehicle outside the house in road. Bangalore citizens may have to pay this amount along with property tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X