ಲೋಕಾಯುಕ್ತರ ಕೊರಳಿಗೆ ಭೂಕಬಳಿಕೆಯ ಉರುಳು?

Lokayukta Justice Shivaraj Patil
ಬೆಂಗಳೂರು, ಸೆ. 16 : ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರನ್ನು ಲೋಕಾಯುಕ್ತರನ್ನಾಗಿ ನೇಮಿಸಿ ತಪ್ಪು ಮಾಡಿದೆ ಎಂದು ಪೇಚಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮುಖದಲ್ಲಿಯೇ ಮುಗುಳುನಗು ತರುವಂಥ ಸಂದಿಗ್ಧತೆಯಲ್ಲಿ ನೂತನ ಲೋಕಾಯುಕ್ತರು ಸಿಲುಕಿಕೊಂಡಿದ್ದಾರೆ.

ಸಚಿವರು ಮತ್ತು ಸರಕಾರಿ ಅಧಿಕಾರಿಗಳ ಭ್ರಷ್ಟತನವನ್ನು ಬಯಲಿಗೆಳೆಯುವ ಕಾಯಕಕ್ಕೆ ತೊಡಗಿರುವ ನ್ಯಾ. ಶಿವರಾಜ ಪಾಟೀಲರೇ ಅಕ್ರಮವಾಗಿ ಭೂಮಿ ಹೊಂದಿರುವ ಆರೋಪದ ಸುಳಿಗೆ ಸಿಕ್ಕಿದ್ದಾರೆ. ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಮೂರು ಸ್ಥಿರಾಸ್ತಿಗಳನ್ನು ಪಾಟೀಲರು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಿಯಮಗಳ ಪ್ರಕಾರ, ಸರಕಾರದಿಂದ ಅನುದಾನಿತವಾದ ಒಂದು ಆಸ್ತಿಯನ್ನು ಮಾತ್ರ ಹೊಂದಲು ಸಾಧ್ಯ. ಆದರೆ, ಪಾಟೀಲರ ಹೆಂಡತಿಯ ಹೆಸರಿನಲ್ಲಿಯೂ ಆಸ್ತಿ ಇದೆ ಎಂಬ ಸಂಗತಿ ಹೊರಬಿದ್ದಿದೆ. ಈ ಆರೋಪಗಳನ್ನು ತಳ್ಳಿಹಾಕಿರುವ ಲೋಕಾಯುಕ್ತರು, ಹೆಂಡತಿಗೆ ಸೇರಿದ ಆಸ್ತಿಯನ್ನು ಸರಕಾರಕ್ಕೆ ಮರಳಿಸುವುದಾಗಿ ಹೇಳಿದ್ದಾರೆ.

ಯಡಿಯೂರಪ್ಪ ಅವರ ಭೂ ಕಬಳಿಕೆಯ ಪ್ರಕರಣವನ್ನು ಲೋಕಾಯುಕ್ತ ಪಾಟೀಲರು ತನಿಖೆ ಮಾಡುತ್ತಿರುವ ಹಂತದಲ್ಲಿಯೇ ಈ ಆರೋಪಗಳು ಕೇಳಿಬಂದಿರುವುದು ಅವರನ್ನು ಸಾಕಷ್ಟು ಮುಜುಗರಕ್ಕೆ ತಳ್ಳಿದೆ. ಎ ರಾಜಾನಂಥ ದುರುಳರನ್ನು ಜೈಲಿಗೆ ತಳ್ಳಿದವರೇ ಅಕ್ರಮ ಎಸಗಿದ ಆರೋಪಕ್ಕೆ ಸಿಲುಕಿಕೊಂಡಿದ್ದಾರೆ.

ಕೇವಲ ಒಂದು ದಿನದ ಹಿಂದೆ, "ನಾನು ಕೆಲಸ ಮಾಡುವ ರೀತಿಯೇ ಬೇರೆ. ಮುಂದೆ ಏನು ಮಾಡುತ್ತೇನೆಂದು ನೀವೇ ನೋಡುವಿರಿ" ಎಂದು ಲೋಕಾಯುಕ್ತ ನ್ಯಾ. ಶಿವರಾಜ ಪಾಟೀಲರು ಯಾದಗಿರಿ ಜನತೆಯ ಮುಂದೆ ನುಡಿದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+