ಯಡ್ಡಿ ಹೋದ್ಮೇಲೆ ಚಂಪಾಗೆ ಸಿಕ್ತು ಪಂಪ ಪ್ರಶಸ್ತಿ

Yeddyurappa and Prof. Champa
ಬೆಂಗಳೂರು, ಸೆ.14: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿರೋಧ ವ್ಯಕ್ತಪಡಿಸದಿದ್ದರೆ, ಪ್ರೊ. ಚಂಪಾ ಅವರಿಗೆ ಕಳೆದ ವರ್ಷವೇ ಪಂಪ ಪ್ರಶಸ್ತಿ ಲಭಿಸಬೇಕಿತ್ತು.

ಆದರೂ, ತಡಮಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಂತೂ ಇಂತೂ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅವರಿಗೆ 2009ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಆಯ್ಕೆ ಮಾಡಿ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಸುಮಾರು 50 ವರ್ಷದ ಅಕ್ಷರದ ವ್ಯವಹಾರ, ಸಾಹಿತ್ಯ ಕೃಷಿ, ಪ್ರಬಂಧಗಳ ಸೇವೆಗೆ ರಾಜ್ಯಮಟ್ಟದ ಉತ್ಕೃಷ್ಟ ಪ್ರಶಸ್ತಿ ಬಂದಿರುವುದಕ್ಕೆ ಹೆಮ್ಮೆ ಎನಿಸಿದೆ ಎಂದು ಪ್ರೊ. ಚಂಪಾ ಪ್ರತಿಕ್ರಿಯಿಸಿದ್ದಾರೆ.

ಚಂಪಾ ಕಂಡ್ರೆ ಯಡ್ಡಿಗೆ ಏಕೆ ಉರಿ?: ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಚಂದ್ರಶೇಖರ ಪಾಟೀಲರು ನಕ್ಸಲ್ ಪರ ನಿಲುವು ಹೊಂದಿದ್ದಾರೆ. ಅವರಿಗೆ ವೇದಿಕೆಯನ್ನು ವಿಚಾರ ಮಂಡನೆಗೆ ಅವಕಾಶ ನೀಡಬಾರದು ಎಂದು ಯಡಿಯೂರಪ್ಪ ಸೂಚಿಸಿದ್ದರು.

ಯಡಿಯೂರಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ಚಂಪಾಗೆ ಪ್ರಶಸ್ತಿ ಸಿಗದಂತೆ ತಡೆ ಹಿಡಿದಿದ್ದರು. ಹಿರಿಯ ಸಾಹಿತಿ ಟಿ.ವಿ ವೆಂಕಟಾಚಲ ಶಾಸ್ತ್ರಿ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ನೀಡಿದ ಶಿಫಾರಸ್ಸನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾನ್ಯ ಮಾಡಿರಲಿಲ್ಲ.

ಚಂಪಾ ಅವರಿಗೆ 2010ರಲ್ಲಿ ಸಿಗಬೇಕಿದ್ದ ಪ್ರಶಸ್ತಿ 2011ರಲ್ಲಿ ಕೊನೆಗೂ ಸಿಗುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+