ಶ್ರೀರಾಮುಲು ಬಂಧನಕ್ಕೆ ಸಿದ್ದರಾಮಯ್ಯ ಅಗ್ರಹ
ಬೆಂಗಳೂರು,
ಸೆ.14: ಪ್ರಭಾವಿ ವ್ಯಕ್ತಿಗಳಾಗಿರುವ ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ಅವರನ್ನು ಕೂಡಲೇ ಸಿಬಿಐ ಬಂಧಿಸಬೇಕು. ಇಲ್ಲದಿದ್ದರೆ ರೆಡ್ಡಿ ಸಾಮ್ರಾಜ್ಯದ ಅಮೂಲ್ಯ ಸಾಕ್ಷಿ ದಾಖಲೆಗಳು ಸಿಬಿಐ ಕೈ ಸೇರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. id="toptextpromo">ಓಎಂಸಿ
ಅಕ್ರಮ ಗಣಿಗಾರಿಕೆ ಆಂಧ್ರ ಗಡಿಯಲ್ಲಿಯಾದರೂ ಅದರ ಬಿಸಿ ತಟ್ಟುವುದು ಕರ್ನಾಟಕಕ್ಕೆ, ಬಳ್ಳಾರಿಗೆನೇ. ಆದಷ್ಟು ಬೇಗ ರೆಡ್ಡಿ ಬೆಂಬಲಿಗರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸದಿದ್ದರೆ ಸತ್ಯವನ್ನು ಮುಚ್ಚಿಹಾಕಿದ್ದಂತಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಶ್ರೀರಾಮುಲು
ರಾಜೀನಾಮೆ ನೀಡಿದರೂ ಅದನ್ನು ಅಂಗೀಕರಿಸದೆ ಸುಮ್ಮನಿರುವ ಸಭಾಪತಿ ಕೆ.ಜಿ. ಬೋಪಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಾನ ಉಳಿಸಿಕೊಳ್ಳಲಿ. ಬಿಜೆಪಿಯಲ್ಲಿ ಅಡಿಯಿಂದ ಮುಡಿಯವರೆಗೂ ಭ್ರಷ್ಟರೇ ತುಂಬಿದ್ದಾರೆ ಎಂದು ಸಿದ್ದು ತಮ್ಮ ಎಂದಿನ ಸ್ಮೈಲ್ ಕೊಟ್ಟರು.











Click it and Unblock the Notifications