• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾದಗಿರಿಯನ್ನು ಗಡಗಡಿಸಿದ ಡಬ್ಬಲ್ ಮರ್ಡರ್!

By * ಸಾಗರ ದೇಸಾಯಿ. ಯಾದಗಿರಿ
|
ಯಾದಗಿರಿ, ಸೆ. 14 : ಯಾದಗಿರಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಇಬ್ಬರು ಮಹಿಳೆಯರು ಬರ್ಬರವಾಗಿ ಕೊಲೆಗೀಡಾಗಿದ್ದಾರೆ. ಶಹಾಪೂರ ತಾಲೂಕಿನ ನಾಯ್ಕಲ್ ಮತ್ತು ಸುರಪುರ ತಾಲೂಕಿನ ಹುಣಸಗಿಯಲ್ಲಿ ನಡೆದಿರುವ ಎರಡು ಕೊಲೆಗಳು ಜಿಲ್ಲೆಯನ್ನು ತಲ್ಲಣಗೊಳಿಸಿವೆ.

ಹೆಂಡತಿ ಕಳಿಸದ ಅತ್ತೆಯ ಹತ್ಯೆ : ಸೋಮವಾರ ರಾತ್ರಿ ಶಹಾಪುರ ತಾಲೂಕಿನ ನಾಯ್ಕಲ್‌ನಲ್ಲಿ ಹೆಂಡತಿಯನ್ನು ತನ್ನೊಂದಿಗೆ ಕಳಿಸದ ಅತ್ತೆಯನ್ನು ಅಳಿಯನೇ ಹತ್ಯೆ ಮಾಡಿದ್ದಾನೆ. ಮರಿಯಮ್ಮ (46) ಕೊಲೆಯಾದ ಮಹಿಳೆ.

ನಾಯ್ಕಲ್ ವಾಸಿಯಾಗಿರುವ ಆರೋಪಿ ಮೈಲಾರಿ ಅದೇ ಗ್ರಾಮದ ಮರಿಯಮ್ಮನ ಮಗಳನ್ನು ಮದುವೆಯಾಗಿದ್ದ. ತವರಿನಲ್ಲಿದ್ದ ಹೆಂಡತಿಯನ್ನು ಮನೆಗೆ ಕರೆದೊಯ್ಯಲು ಬೆಳಿಗ್ಗೆ ಅತ್ತೆ ಮನೆಗೆ ಬಂದಿದ್ದ. ಆಗ ಮಾತಿಗೆ ಮಾತು ಬೆಳೆದು ಸಿಟ್ಟಿನ ಭರದಲ್ಲಿ ಅಲ್ಲಿದ್ದ ಒನಕೆಯಿಂದ ಅತ್ತೆಯ ತಲೆಗೆ ಹೊಡೆದಿದ್ದಾನೆ.

ತೀವ್ರ ಅಸ್ವಸ್ಥಳಾದ ಮರಿಯಮ್ಮ ಸೋಮವಾರ ರಾತ್ರಿ ರಾಯಚೂರು ಆಸ್ಪತ್ರೆಯಲ್ಲಿ ಸಾವನ್ನಪಿದ್ದಾಳೆಂದು ವಡಗೇರಾ ಪಿಎಸ್‌ಐ ಎಂ.ಜಿ. ಪಾಟೀಲ್ ತಿಳಿಸಿದ್ದಾರೆ. ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯನ್ನ ಕೊಂದ ಪತಿರಾಯ : ಸುರಪುರ ತಾಲೂಕಿನ ಹುಣಸಗಿಯಲ್ಲಿ ಮಂಗಳವಾರ ನಸುಕಿನಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಮಚ್ಚಿನಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ಮಲ್ಲಮ್ಮ ಅಲಿಯಾಸ್ ಅಂಬ್ರವ್ವ (30) ಕೊಲೆಯಾದ ಮಹಿಳೆ.

ಗಂಡ ಭೀಮಣ್ಣ ಮತ್ತು ಪತ್ನಿ ಮಲ್ಲಮ್ಮನ ಮಧ್ಯೆ ಆಗಾಗ್ಗೆ ಜಗಳ ನಡೆಯುತಿತ್ತು. ಮಂಗಳವಾರ ಬೆಳಿಗ್ಗೆ ಸಹ ಕ್ಷುಲ್ಲಕ ಕಾರಣಕ್ಕೆ ದಂಪತಿ ಮಧ್ಯೆ ಜಗಳ ಶುರವಾಗಿ, ಮೂರು ಗಂಟೆ ಸಮಯದಲ್ಲಿ ಭೀಮಣ್ಣ ಮಾಂಸ ಕತ್ತರಿಸುವ ಮಚ್ಚಿನಿಂದ ಪತ್ನಿಯ ಕುತ್ತಿಗೆಗೆ ನಾಲ್ಕಾರು ಬಾರಿ ಹೊಡೆದಾಗ ಅವಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆಂದು ಸಿಪಿಐ ಎಂ.ಜಿ.ಸತ್ಯನಾರಾಯಣರಾವ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Double murder jolts Yadgir district. Son-in-law takes law into his own hands and murders mother-in-law for sending his wife back to his home in Yadgir. In another case husband murders wife for silly reason with meat cutting knife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more