ಕಟ್ಟಾಳುಗಳು ಜೈಲು ಪಾಲು: ನ್ಯಾಯ ದೇವತೆಗೆ ನಮೋ ನಮಹಃ

reddy-scam-darshan-shame-hail-judiaciary
ಬೆಂಗಳೂರು, ಸೆ.13: ಯಾಕೋ ನಮ್ಮ ನ್ಯಾಯ ದೇವತೆಯ ಬಗ್ಗೆ ಅಪಾರ ಹೆಮ್ಮೆ, ಗೌರವ ಮೂಡುತ್ತಿದೆ. ರಾಜಾ, ಕನ್ನಿಮೋಳಿ, ಕಲ್ಮಾಡಿ, ಅಮರ್ ಸಿಂಗ್, ಜನಾರ್ದನ ರೆಡ್ಡಿ, ದರ್ಶನ್ ಅಂತಹ ಕಟ್ಟಾಳುಗಳು ಸಾಲುಸಾಲಾಗಿ ಜೈಲು ಪಾಲಾದರು ಎಂದು ಹೀಗೆ ಹೇಳುತ್ತಿಲ್ಲ. ಆದರೂ ...

ಯಾವ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಜನ ರೋಸಿ ಹೋಗಿದ್ದರೋ, ಎಲ್ಲವೂ ಮುಗಿಯಿತು, ಮುಂದಿನ ಪೀಳಿಗೆಗೆ ಏನಪ್ಪಾ ಹೇಳೋದು ಅನ್ನುತ್ತಿದ್ದಾಗ ಅದಕ್ಕಿಂತ ಮುಂಚೆ ನಮ್ಮ ಕಾಲದಲ್ಲೇ ಇನ್ನೂ ಏನೇನು ನೋಡಬೇಕೋ ಎಂದು ಕ್ಷೋಭೆಗೊಳಗಾಗಿದ್ದರೋ ಅದೇ ನಾಡಿನಲ್ಲಿ ನ್ಯಾಯಾಂಗ ಸೆಟೆದು ನಿಂತಿದೆ.

ಯಾವ ಶಾಸಕಾಂಗ ತುಚ್ಚವಾಗಿ ನಡೆದುಕೊಂಡು ಜನ ಜೀವನವನ್ನು ಸಹನೀಯವಾಗಿಸಿತ್ತೋ ಆ ನಾಡಿನಲ್ಲಿ ದಕ್ಷ, ಪ್ರಮಾಣಿಕ ಅಧಿಕಾರಿಗಳು ಗೋಚರಿಸುತ್ತಿದ್ದಾರೆ. ಎಲ್ಲವೂ ಮುಗಿದಿಲ್ಲ, ನಾವಿದ್ದೇವೆ ಎಂದು ಭರವಸೆಯ ಆಶಾಕಿರಣವಾಗಿ ರಾರಾಜಿಸುತ್ತಿದ್ದಾರೆ.

ಇಂದಿನ ಯುವ ಪೀಳಿಗೆಗೆ 'ಹೌದು, ಎಲ್ಲವೂ ಮುಗಿದಿಲ್ಲ. ಒಳ್ಳೆಯ ದಿನಗಳು ಮುಂದಿವೆ. ಭ್ರಷ್ಟರಿಗೆ, ನಿಷ್ಪಾಪಿ ಹೆಣ್ಣು ಮಕ್ಕಳಿಗೆ ಕಂಟಕವಾಗಿರುವವರಿಗೆ ಶಿಕ್ಷೆ ಕಾದಿದೆ. ಕಿರಾತಕರಿಗೆ ಮುಂದಿದೆ ಮಾರಿ ಹಬ್ಬ' ಎನ್ನುವಂತಾಗಿದೆ. ನ್ಯಾಯ ದೇವತೆಗೆ ಉಘೇ ಉಘೇ !

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+