ಜಾಮೀನು ಸಿಗಲಿಲ್ಲ; ಜನಾರ್ದನ ರೆಡ್ಡಿಗೆ ತೀವ್ರ ಹಿನ್ನಡೆ
ಹೈದರಾಬಾದ್,
ಸೆ.13: ವಿಚಾರಣಾಧೀನ ಕೈದಿ ನಂಬರ್ 697, ಗಣಿವೀರ ಗಾಲಿ ಜನಾರ್ದನ ರೆಡ್ಡಿಗೆ ಸಿಬಿಐನ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಜತೆಗೆ ಸೆಪ್ಟೆಂಬರ್ 19ರ ವರೆಗೆ ಸಿಬಿಐ ವಶಕ್ಕೆ ನೀಡಿದೆ. ಇದೇ ವೇಳೆ, ಬಿ.ವಿ. ಶ್ರೀನಿವಾಸ್ ರೆಡ್ಡಿಗೂ ಜಾಮೀನು ನಿರಾಕರಿಸಲಾಗಿದೆ. id="toptextpromo">ಇದರಿಂದ
ರೆಡ್ಡಿಗಳಿಗೆ ತೀವ್ರ ಹಿನ್ನಡೆಯಾಗಿದೆ. ಇದೇ ವೇಳೆ, ರೆಡ್ಡಿ ಪ್ರಕರಣದಲ್ಲಿ ಹೈದರಾಬಾದ್ ವಲಯದ ಸಿಬಿಐನ ವಿಶೇಷ ನಿರ್ದೇಶಕ ವಿ ವಿ ಲಕ್ಷ್ಮಿನಾರಾಯಣ ಅವರ ಕಠಿಣ ಶ್ರಮ ಫಲ ನೀಡಿದೆ ಎಂದು ಸಿಬಿಐ ಮೂಲಗಳು ಸಂತಸ ವ್ಯಕ್ತಪಡಿಸಿವೆ. id='are-slot-1' class='oiad oi-axt oiadv'> id='top-searched-articles'>ಜಾಮೀನು
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಿಬಿಐ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿವೇಕ್ ಟಂಕ ಅವರು, ರೆಡ್ಡಿ ದ್ವಯರು ಬಳ್ಳಾರಿ ಮತ್ತು ಆಂಧ್ರ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಜಾಮೀನು ನೀಡಬಾರದು ಎಂದು ಹೇಳಿದರು. ಜನಾರ್ದನ ರೆಡ್ಡಿ ಪರ ಹಿರಿಯ ವಕೀಲರಾದ ಯು.ಯು.ಲಲಿತ್, ಬೆಂಗಳೂರಿನ ಸಿ.ವಿ. ನಾಗೇಶ್ ವಾದ ಮಂಡಿಸಿದರು.











Click it and Unblock the Notifications