ಕೌಟುಂಬಿಕ ಕಲಹ: ಗಂಡ ಹೆಂಡ್ತಿ ಮಧ್ಯೆ ಬಂದ್ರೆ ಮಟಾಷ್

ಜಿಲ್ಲೆಯ ಶಹಪೂರ ತಾಲೂಕಿನ ಸುರಪೂರ ರಸ್ತೆಗೆ ಹೊಂದಿಕೊಂಡಂತೆ ಇರುವ ನಾಯ್ಕಲ್ ಗ್ರಾಮದಲ್ಲಿ ಈ ದುರ್ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೈಲಾರಿ ಎಂಬಾತ ಅತ್ತೆ ಮನೆಯಲ್ಲಿದ್ದ ತನ್ನ ಹೆಂಡತಿಯನ್ನು ಮನೆಗೆ ಕರೆದೊಯ್ಯಲು ಬಂದಿದ್ದಾನೆ. ಆದರೆ ಅತನ ಜೊತೆಗೆ ಹೋಗಲು ಪತ್ನಿ ನಿರಾಕರಿಸಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ.
ಈ ಸಮಯದಲ್ಲಿ ಮಧ್ಯೆ ಪ್ರವೇಶಿದ ಅತ್ತೆ(ಮೈಲಾರಿ ಪತ್ನಿಯ ತಾಯಿ) ಇಬ್ಬರನ್ನು ಸಮಾಧನಾನ ಪಡಿಸಲು ಶತಪ್ರಯತ್ನ ಮಾಡಿದ್ದಾರೆ.
ಹೆಂಡತಿ ಹೇಳಿದ ಯಾವುದೋ ಶಬ್ದ ಕಿವಿಗೆ ಬಿದ್ದೊಡನೆ ಮೈಲಾರಿ ಮೈಯಲ್ಲಿ ಪುರುಷಸಿಂಹ ಜಾಗೃತ ನಾಗಿದ್ದಾನೆ. ಘರ್ಜಿಸುತ್ತಾ ನುಗ್ಗಿದ ಮೈಲಾರಿ ಗೋಡೆಯ ಬಳಿ ಇದ್ದ ಒನಕೆ ತೆಗೆದುಕೊಂಡು ಪ್ರಹಾರ ನಡೆಸಲು ಮುಂದಾಗಿದ್ದಾನೆ.
ಅಳಿಯನ ರೌದ್ರಾವತಾರ ಕಂಡ ಅತ್ತೆ ಮಧ್ಯೆ ಪ್ರವೇಶಿಸಿದ್ದಾರೆ. ಪತ್ನಿಗೆ ಬೀಳಬೇಕಾದ ಹೊಡೆತ ಮಧ್ಯೆದಲ್ಲಿ ಬಂದ ಅತ್ತೆಗೆ ತಗುಲಿದೆ. ಇದರಿಂದ ಗಾಬರಿಗೊಂಡ ಮೈಲಾರಿ ಅಲ್ಲಿಂದ ಪರಾರಿಯಾಗಿದ್ದಾನೆ. ಯಾದಗಿರಿ ಜಿಲ್ಲಾ ಪೊಲೀಸರು ಮೈಲಾರಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications