ಕೋರ್ಟಿಗೆ ಯಡ್ಡಿ ಗೈರು, ಜಾಮೀನು ಆಸೆ ಜೀವಂತ

ಕೋರ್ಟ್ ಗೆ ಆಗಮಿಸಿದ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಶಾಸಕ ಹೇಮಚಂದ್ರ ಸಾಗರ್ ಅವರಿಗೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸಾಥ್ ನೀಡಿದರು.
ಹಾಜರಾಗದೇ ವಿನಾಯ್ತಿ ಕೋರಿ ಮುಖಭಂಗ ಅನುಭವಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಕೊನೆಗೂ ಕೋರ್ಟ್ ವಿಚಾರಣೆಗೆ ಹಾಜರಾಗದೆ ಬಂಕ್ ಮಾಡಿದ್ದಾರೆ. ಯಡಿಯೂರಪ್ಪ ಅವರ ಆರೋಗ್ಯ ಪರಿಸ್ಥಿತಿ ಏನಾಗಿದಿಯೋ ಇನ್ನೂ ತಿಳಿದುಬಂದಿಲ್ಲ.
ಆದರೆ, ಹೈಕಮಾಂಡ್ ಸಭೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಯಡಿಯೂರಪ್ಪ ವಕೀಲ ರವಿ ನಾಯ್ಕ್ ಹೇಳಿದರು. ಮುಂದಿನ ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ನ್ಯಾಯಮೂರ್ತಿ ಸುಧೀಂದ್ರ ರಾವ್ ಅವರು ಸೂಚಿಸಿದರು.
ಕೊಪ್ಪಳ ಉಪ ಚುನಾವಣೆ ನೆಪವೊಡ್ಡಿ ಮತ್ತೆ ಯಡಿಯೂರಪ್ಪ ಕೋರ್ಟ್ ಗೆ ಗೈರು ಹಾಜರಾಗಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications