ಗಣಿ ಅಕ್ರಮ ಕಿಂಗ್ ಪಿನ್ ರೆಡ್ಡಿಗೆ ಮಂಪರು ಪರೀಕ್ಷೆ?

Janardhan Reddy may undergo Narco Analysis test
ಹೈದರಾಬಾದ್, ಸೆ.13: ಅಕ್ರಮ ಗಣಿಗಾರಿಕೆ, ಅರಣ್ಯ ನಾಶ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಅಳಿಯ ಶ್ರೀನಿವಾಸ್ ರೆಡ್ಡಿಗೆ ಅಗತ್ಯ ಬಿದ್ದರೆ ಮಂಪರು ಪರೀಕ್ಷೆ ನಡೆಸಲಾಗುವುದು ಎಂದು ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿ ನಾರಾಯಣ ಹೇಳಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಇಬ್ಬರು ವಕೀಲರ ಉಪಸ್ಥಿತಿಯಲ್ಲಿ ರೆಡ್ಡಿಗಳ ವಿಚಾರಣೆಯನ್ನುಸಿಬಿಐ ಆರಂಭಿಸಿದೆ. ವಕೀಲ ರಾಮರೆಡ್ಡಿ ಹಾಗೂ ಪ್ರವೀಣ್ ಅವರ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸುವಂತೆ ಕೋರ್ಟ್ ಮಂಗಳವಾರ(ಸೆ.13) ಆದೇಶಿಸಿತ್ತು

'ನಾವು ಯಾರನ್ನು ಬೇಕಾದರೂ ಪ್ರಶ್ನಿಸಬಹುದು. ಯಾರ ಸ್ಥಳದಲ್ಲಿಯಾದರೂ ದಾಳಿ ನಡೆಸಿ ದಾಖಲೆ ವಶಪಡಿಸಿಕೊಳ್ಳಬಹುದು.

ನಮ್ಮ ಕೈಲಿ ಸದ್ಯಕ್ಕೆ ಆರು ದಿನಗಳ ಅವಕಾಶವಿದೆ. ರೆಡ್ಡಿದ್ವಯರು ವಿಚಾರಣೆಯಲ್ಲಿ ಯಾವ ಯಾವ ವಿಷಯಗಳು ಹೊರಬೀಳುತ್ತದೆಯೋ ನೋಡೋಣ' ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ.

ಪರೀಕ್ಷೆಗಳ ಪ್ರಯೋಗ: ಅಗತ್ಯ ಬಿದ್ದರೆ ವಿಚಾರಣೆಗಾಗಿ ಹೆಚ್ಚಿನ ಕಾಲಾವಾಕಾಶ ಕೇಳಬಹುದು. ನಾರ್ಕೋ ಅನಾಲಿಸಿಸ್, ಬ್ರೈನ್ ಮ್ಯಾಪಿಂಗ್, ಪಾಲಿಗ್ರಾಫ್ ಸೇರಿದಂತೆ ಅನೇಕ ಪರೀಕ್ಷೆಗಳನ್ನು ಆರೋಪಿಯ ಒಪ್ಪಿಗೆ ಪಡೆದು ಸುಪ್ರೀಂಕೋರ್ಟ್ ಆದೇಶದಂತೆ ನಡೆಸುವ ಸಾಧ್ಯತೆಯೂ ಇದೆ.

ಸರ್ಕಾರಿ ಅಧಿಕಾರಿಗಳು ಸೇರಿದಂತೆ ಅನೇಕ ವ್ಯಕ್ತಿಗಳು ಈ ಗಣಿ ಅಕ್ರಮದಲ್ಲಿ ತೊಡಗಿರುವುದರಿಂದ ಸಿಬಿಐಗೆ ವಿಚಾರಣೆ ನಡೆಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಕೋರ್ಟ್ ಗೆ ಮನವಿ ಸಲ್ಲಿಸುತ್ತೇವೆ.

ಉಪಗ್ರಹ ಆಧಾರಿತ ಮ್ಯಾಪ್, ಗಡಿ ಭಾಗದಲ್ಲಿನ ಓಎಂಸಿಗೆ ಸೇರಿದ 68.52 ಹೆಕ್ಟೇರು ಭೂ ಪ್ರದೇಶದ ಅಕ್ರಮ ಗಣಿಗಾರಿಕೆಯ ನೈಜ ಚಿತ್ರಣ ಕೋರ್ಟ್ ಗೆ ನೀಡಲಾಗಿದೆ ಎಂದು ಸಿಬಿಐ ಪರ ವಕೀಲ ಕಂಕಾ ಹೇಳಿದರು.

ಇದಕ್ಕೂ ಕೋರ್ಟ್ ಆದೇಶ ಹೊರಬಿದ್ದ ಮೇಲೆ ಸಿಬಿಐ ಎಎಸ್ ಪಿ ಆರ್ ಎಂ ಖಾನ್ ಅವರು ಚಂಚಲಗುಡ ಜೈಲಿಗೆ ತೆರಳಿ ರೆಡ್ಡಿ ದ್ವಯರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಕರೆದೊಯ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+