ತಾಂಜಾನಿಯಾ ಜಲದುರಂತ, 200ಕ್ಕೂ ಅಧಿಕ ಸಾವು

Tanzania ferry capsizes kill 200
ಡೊಡೊಮ, ಸೆ.10: ತಾಂಝಾನಿಯದ ಝಂಝಿಬಾರ್‌ನಿಂದ ಪೆಂಬ ದ್ವೀಪಕ್ಕೆ 600ಕ್ಕೂ ಅಧಿಕ ಜನರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮುಳುಗಿದ್ದು ಸುಮಾರು 200 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಝಂಝಿಬಾರ್ ಮತ್ತು ಪೆಂಬ ಝಂಝಿಬಾರ್ ಪರ್ಯಾಯ ದ್ವೀಪದ ಎರಡು ಪ್ರಮುಖ ದ್ವೀಪಗಳು. ಈ ಎರಡು ದ್ವೀಪಗಳು ಪ್ರವಾಸಿಗರ ಆಕರ್ಷಣೆಯ ತಾಣಗಳು. ಇಲ್ಲಿನ ಹಿಂದೂ ಮಹಾಸಾಗರದ ಅಪೂರ್ವ ಶ್ವೇತ ಬೀಚ್‌ಗಳಿಗಾಗಿ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ.

"ಈ ದೋಣಿಯಲ್ಲಿ 572ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂಬುದನ್ನು ದೋಣಿಗೆ ಸಂಬಂಧಪಟ್ಟ ದಾಖಲೆಗಳು ತೋರಿಸುತ್ತವೆ" ಎಂದು ಝಂಝಿಬಾರ್ ಪೊಲೀಸ್ ಕಮಿಶನರ್ ಮೂಸಾ ಅಲಿ ಮೂಸಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

"ಈ ತನಕ ಸುಮಾರು 325 ಮಂದಿಯನ್ನು ರಕ್ಷಿಸಲಾಗಿದೆ. ಸುಮಾರು 100 ಮೃತದೇಹಗಳನ್ನು ಮೇಲಕ್ಕೆತ್ತಿದ್ದೇವೆ. ಆದರೆ, ಈ ಹಂತದಲ್ಲಿ ಮೃತಪಟ್ಟವರ ನಿರ್ದಿಷ್ಟ ಸಂಖ್ಯೆಯನ್ನು ನಾನು ನೀಡಲು ಸಾಧ್ಯವಿಲ್ಲ. ಪರಿಸ್ಥಿತಿ ಗಂಭೀರವಾಗಿದೆ" ಎಂದು ಅವರು ಹೇಳಿದರು.

ಪೆಂಬ ಮತ್ತು ಝಂಝಿಬಾರ್ ದ್ವೀಪಗಳ ನಡುವೆ 40 ಕಿ.ಮೀ. ಅಂತರವಿದೆ. ಇಲ್ಲಿನ ದೋಣಿಗಳ ಪರಿಸ್ಥಿತಿ ಹದಗೆಟ್ಟಿತ್ತು ಹಾಗೂ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಮತ್ತು ಸರಕನ್ನು ಸಾಗಿಸಲಾಗುತ್ತಿತ್ತು ಎಂದು ಈ ಎರಡು ದ್ವೀಪಗಳ ಮಧ್ಯೆ ನಿಯಮಿತವಾಗಿ ಸಂಚರಿಸುವ ಪ್ರಯಾಣಿಕರು ಹೇಳಿದ್ದಾರೆ.

ರಕ್ಷಿಸಲ್ಪಟ್ಟ 40 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ತಾಂಝಾನಿಯ ಸರಕಾರ ತುರ್ತು ಪರಿಹಾರ ಕೇಂದ್ರವೊಂದನ್ನು ಸ್ಥಾಪಿಸಿದೆ. ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಅದು ವಿದೇಶಗಳ (ಮುಖ್ಯವಾಗಿ ದಕ್ಷಿಣ ಆಫ್ರಿಕ ಮತ್ತು ಕೀನ್ಯಾ) ನೆರವನ್ನು ಕೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+