ಸರಣಿ ಅತ್ಯಾಚಾರ ನಡೆಸಿ, ಫೋಟೊ ತೆಗೆದಿದ್ದ ಮ್ಯಾನೇಜರ್ ಬಂಧನ

ಮಾರಾಟ ಟಾರ್ಗೆಟ್ ರೀಚ್ ಆಗಲು ನೆರವಾಗುತ್ತೇನೆ. ಮತ್ತು ಮಾನಸಿಕ ಒತ್ತಡಗಳನ್ನು ದೂರ ಮಾಡುತ್ತೇನೆ ಎಂದು ಪುಸಲಾಯಿಸಿ 45 ವರ್ಷದ ಲು ಯುವಾನ್ಮಹಿಳಾಮಣಿಗಳನ್ನು ತನ್ನ ಕುಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಅಂದಹಾಗೆ, ಈ ಆಸಾಮಿ ಪ್ರಸಿದ್ಧ ಮಹಿಳಾ ಸೌಂದರ್ಯವರ್ಧಕಗಳ ಮಾರುಕಟ್ಟೆ ಪ್ರಚಾರಾಧಿಕಾರಿ.
ಗ್ವಾಂಗ್ ಡಾಂಗ್ ಪ್ರಾಂತ್ಯದಲ್ಲಿ 2009ರ ಆಗಸ್ಟ್ ನಿಂದ ಯುವಾನ್ ಈ ಕಾರ್ಯಾಚರಣೆ ನಡೆಸಿದ್ದಾನೆ. ತರಬೇತಿ ನೆಪದಲ್ಲಿ ಇವಯ್ಯ ಟ್ರೈನಿ ಯುವತಿಯರನ್ನು ತನ್ನ ಕೋಣೆಗೆ ಕರೆಯುತ್ತಿದ್ದ. ಅಲ್ಲಿ ಆಟ ಶುರುವಿಟ್ಟುಕೊಳ್ಳುತ್ತಿದ್ದ.
'ನೋಡಿ ಹೊಸಬರೊಂದಿಗೆ ಹೇಗೆ ಸಂಭಾಷಣೆ ಆರಂಭಿಸಬೇಕು ಎಂಬುದನ್ನು ನಿಮಗೆ ಹೇಳಿಕೊಡುತ್ತೇನೆ' ಎಂದು ಮಾತಿಗಿಳಿಯುತ್ತಿದ್ದ ಯುವಾನ್, ನಂತರ ಒಬ್ಬೊಬ್ಬೇ ಯುವತಿಯ ಒಂದೊಂದೇ ಬಟ್ಟೆಯನ್ನು ಕಳಚುವಂತೆ ಆಜ್ಞಾಪಿಸುತ್ತಿದ್ದ. ಬಳಿಕ ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದ. ಇದೆಲ್ಲ ಮಾರುಕಟ್ಟೆ ವಿಧಾನಗಳು ಎಂದೂ ಸಬೂಬು ಕೊಡುತ್ತಿದ್ದ.
ಮುಂದೆ... ಆ ನಗ್ನ ಯುವತಿಯರ ಫೋಟೊಗಳನ್ನೂ ಕ್ಲಿಕ್ಕಿಸುತ್ತಿದ್ದ. ಇದೇ ಫೋಟೋಗಳನ್ನು ತೋರಿಸಿ, ಬ್ಲ್ಯಾಕ್ ಮೇಲ್ ಸಹ ಮಾಡುತ್ತಿದ್ದ. ಈ ರೀತಿಯಾಗಿ ಯುವತಿಯರು ಇವನ ಮೋಸ ಜಾಲದಲ್ಲಿ ಸಿಲುಕಿ ಒದ್ಲಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications