ಅಡ್ವಾಣಿ ಪ್ರಧಾನಿ ಅಭ್ಯರ್ಥಿಯೇ? ಯಾತಕೆ ಯಾತ್ರಾ?

ಎಲ್. ಕೆ. ಅಡ್ವಾಣಿಯವರು ಭ್ರಷ್ಟಾಚಾರದ ಬಗ್ಗೆ ರಾಷ್ಟ್ರದಾದ್ಯಂತ ಯಾತ್ರೆ ನಡೆಸಲು ಬಿಜೆಪಿ ಸಂಸದೀಯ ಸಮಿತಿ ಒಪ್ಪಿಗೆ ನೀಡಿದೆ. ಈ ಕುರಿತು ಅಡ್ವಾಣಿ ಪ್ರಧಾನಿ ಅಭ್ಯರ್ಥಿಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ. ಈ ಹಿಂದೆ ರಾಮರಥ ಯಾತ್ರೆಯ ಮೂಲಕ ಅಡ್ವಾಣಿ ಪಡೆದ ಜನಪ್ರಿಯತೆಯ ಹಿನ್ನಲೆಯು ಈ ಪ್ರಶ್ನೆಗಿದೆ.
"ಅಡ್ವಾಣಿ ನಡೆಸಲಿರುವ ಭ್ರಷ್ಟಾಚಾರ ವಿರೋಧಿ ಯಾತ್ರೆಯಲ್ಲಿ ರಾಜಕೀಯವಿಲ್ಲ. ಅವರ ಯಾತ್ರೆಗೆ ಪಕ್ಷ ಒಪ್ಪಿಗೆ ನೀಡಿದೆ. ನಾವು ಅವರ ಯಾತ್ರೆಗೆ ಸಹಕಾರ ನೀಡುತ್ತೇವೆ" ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಸುಷ್ಮಾ ಮಾತನ್ನು ಅರುಣ್ ಜೇಟ್ಲಿ ಅನುಮೋದಿಸುತ್ತಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಎಲ್. ಕೆ. ಅಡ್ವಾಣಿಯೇ? ಅಥವಾ ನರೇಂದ್ರ ಮೋದಿಯೇ? ಕಾದುನೋಡಬೇಕಿದೆ.












Click it and Unblock the Notifications