ಚಂಚಲಗುಡ ಜೈಲಲ್ಲಿ ಭಾವುಕರಾದ ರೆಡ್ಡಿ ಶಾಂತಾ

ಬೆಳಿಗ್ಗೆ 9 ಗಂಟೆಗೆ 15 ನಿಮಿಷಗಳ ಕಾಲ ಅವರ ಭೇಟಿಗೆ ಅವಕಾಶ ಮಾಡಿಕೊಡಲಾಗಿತ್ತು. ರೆಡ್ಡಿಯನ್ನು ಭೇಟಿ ಮಾಡಿಬಂದ ಜೆ ಶಾಂತಾ ಅವರ ಮುಖದಲ್ಲಿ ಭಾವುಕತೆ ಮಡುಗಟ್ಟಿತ್ತು. ರಾಜ್ಯವನ್ನೇ ಆಳಬೇಕಾಗಿದ್ದ ಜನಾರ್ದನ ಜೈಲು ಸೇರಬೇಕಾಯಿತಲ್ಲ ಎಂಬ ನೋವು ಮನೆಮಾಡಿತ್ತು.
ಅವರು ಸುದ್ದಿಗಾರರೊಂದಿಗೆ ಒಂದು ಮಾತನ್ನೂ ಆಡಲಿಲ್ಲ. ಗಂಟಲುಬ್ಬಿಸಿಕೊಂಡಿದ್ದ ಶಾಂತಾ ಅವರನ್ನು ಸುದ್ದಿಗಾರರು ಕೂಡ ಹೆಚ್ಚು ಮಾತನಾಡಿಸಲು ಹೋಗಲಿಲ್ಲ. ಮೌನವೇ ಎಲ್ಲವನ್ನೂ ಹೇಳುತ್ತಿತ್ತು. ಆಂಧ್ರದಲ್ಲಿ ಕೂಡ ಅಪಾರ ಅಭಿಮಾನಿಗಳನ್ನು ಹೊಂದಿರುವ ಜನಾರ್ದನ ರೆಡ್ಡಿಯವರನ್ನು ಭೇಟಿಯಾಗಲು ಅನೇಕರು ಬಂದು ಹೋಗುತ್ತಿದ್ದಾರೆ.
ಗಣೇಶನ ಪೂಜೆ : ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಇಂದು ಹಾಜರಾಗಬೇಕಿರುವ ಜನಾರ್ದನ ರೆಡ್ಡಿ ಇಂದು ಸಹಕೈದಿಗಳೊಂದಿಗೆ ವಿಘ್ನನಿವಾರಕ ಗಣೇಶನನ್ನು ಜೈಲಿನಲ್ಲಿ ಪೂಜಿಸಿದರು. ನಂತರ ಜೈಲಿನಲ್ಲಿ ನೀಡಿದ ಪುಳಿಯೋಗರೆಯನ್ನು ಸೇವಿಸಿದರು.












Click it and Unblock the Notifications