ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ಯಡಿಯೂರಪ್ಪಗೆ ಸೆ.13ರ ತನಕ ರಿಲೀಫ್

By Mahesh
|
Google Oneindia Kannada News

Yeddyurappa
ಬೆಂಗಳೂರು, ಸೆ. 7: ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಬುಧವಾರ ಮಧ್ನಾಹ್ನ ನಡೆದ ಡಿನೋಫಿಕೇಷನ್ ಪ್ರಕರಣದ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಲಾಗಿದೆ.

ಬುಧವಾರ ಮಧ್ಯಾಹ್ನ 3.15ರ ಸುಮಾರಿಗೆ ನಡೆದ ವಿಚಾರಣೆಗೆ ಈ ಪ್ರಕರಣದ ಪಮುಖ ಆರೋಪಿಗಳಾದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕುಟುಂಬದ ಸದಸ್ಯರ ಸಮೇತ ಹಾಜರಾದರು.

ಭೂಹಗರಣ, ಸ್ವಜನ ಪ್ರೀತಿ, ಅಕ್ರಮ ಗಣಿಗಾರಿಕೆ, ಕಿಕ್ ಬ್ಯಾಕ್ ಸೇರಿದಂತೆ ಸರಿ ಸುಮಾರು 15ಕ್ಕೂ ಹೆಚ್ಚು ಆರೋಪಗಳನ್ನು ಯಡಿಯೂರಪ್ಪ ಎದುರಿಸುತ್ತಿದ್ದಾರೆ.

ಯಡಿಯೂರಪ್ಪ ಅವರಿಗೆ ಕೋರ್ಟ್ ತನಕ ಸಚಿವ ರೇಣುಕಾಚಾರ್ಯ, ಹಾಲಪ್ಪ, ನಂದೀಶ್ ರೆಡ್ಡಿ ಹಾಗೂ ಜೀವರಾಜ್ ಅವರು ಸಾಥ್ ನೀಡಿದರು. ನಂತರ ಯಡಿಯೂರಪ್ಪ ಸೇರಿದಂತೆ ಒಟ್ಟು 13 ಜನ ಆರೋಪಿಗಳು ಕಟಕಟೆಯನ್ನು ಹತ್ತಿದರು.

ವಿಚಾರಣೆ ವಿವರ: ಲೋಕಾಯುಕ್ತ ಅಭಿಯೋಜಕರನ್ನು ನೇಮಿಸಿ ಪ್ರತಿ ಶನಿವಾರದಂದೇ ಪ್ರಕರಣದ ವಿಚಾರಣೆ ನಡೆಸುವಂತೆ ಯಡಿಯೂರಪ್ಪ ಪರ ವಕೀಲ ರವಿ ನಾಯ್ಕ್ ನ್ಯಾಯಾಲಯವನ್ನು ಕೋರಿದರು.

ವಕೀಲ ಸಿರಾಜಿನ್ ಪಾಶಾ ಪರ ಯಾರು ವಕಾಲತ್ತು ವಹಿಸಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರ ವಾಗಿಲ್ಲ. ಸೆ.13ರಂದು ಮಧ್ಯಾಹ್ನ 3 ಗಂಟೆ ಈ ಬಗ್ಗೆ ವಾದ ಮಂಡಿಸುವಂತೆ ಸಿರಾಜಿನ್ ಪರ ವಕೀಲ ಸಿಎಚ್ ಹನುಮಂತರಾಯ ಅವರಿಗೆ ನ್ಯಾಯಮೂರ್ತಿ ಸುಧೀಂದ್ರರಾವ್ ಅವರು ಸೂಚಿಸಿದರು.

ಕೇಸ್ ಹಿಸ್ಟರಿ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಹಾಕಿರುವ ಎಫ್ ಐಆರ್ ರದ್ದುಗೊಳಿಸಿ, ಶಿಕ್ಷೆಯಿಂದ ಪಾರು ಮಾಡುವಂತೆ ಯಡಿಯೂರಪ್ಪ ಅವರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ನಾಲ್ಕು ಅರ್ಜಿಯಲ್ಲಿ ಈಗಾಗಲೇ ಎರಡು ಅರ್ಜಿಗಳು ತಿರಸ್ಕಾರಗೊಂಡಿದೆ.

ಭಾರತೀಯ ದಂಡ ಸಂಹಿತೆ ಕಾಯ್ದೆ ಕಲಂ 420, 419,447, 123 ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಆರೋಪ ಸಾಬೀತಾದರೆ 10 ವರ್ಷ ಶಿಕ್ಷೆ ಖಚಿತ.

English summary
Lokayukta Special court judge Sudhindra Rao has adjourned hearing of Land De notification case to Sept.13. Karnataka ex CM BS Yeddyurappa and 13 other are accused in this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X