ಎಚ್ ಡಿಕೆ ಜಾಮೀನು ಅರ್ಜಿ: ಹೈಕೋರ್ಟ್ ವಿಚಾರಣೆ ನಾಳೆಗೆ

ಈ ಮಧ್ಯೆ, ಕೆಳಹಂತದ ನ್ಯಾಯಾಲಯದಲ್ಲಿ (ಲೋಕಾಯುಕ್ತ ವಿಶೇಷ ಕೋರ್ಟ್) ಇದೇ ಪ್ರಕರಣ ಇಂದು (ಮಂಗಳವಾರ) ಮಧ್ಯಾಹ್ನ ವಿಚಾರಣೆ ನಡೆಯಲಿದ್ದು, ಆ ನ್ಯಾಯಾಲಯ ದಂಪತಿಯ ಬಂಧನ ಆದೇಶ ನೀಡಬಾರದು ಎಂದೂ ಹೈಕೋರ್ಟ್ ಸೂಚನೆ ನೀಡಿದೆ. ಇದರಿಂದ ಸದ್ಯಕ್ಕೆ ಬಂಧನದ ಭೀತಿಯಿಂದ ಮುಕ್ತರಾಗಿದ್ದಾರೆ.
ಆದರೆ, ಕುಮಾರ ಸ್ವಾಮಿ ದಂಪತಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲೂ ಗೈರು ಹಾಜರಾಗಿದ್ದರು. ಈ ಸಂದರ್ಭ ಅನಾರೋಗ್ಯದ ಕಾರಣ ನೀಡಿ ಎಚ್‌ಡಿಕೆ ಪರ ವಕೀಲರು ಈ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಸುಧೀಂದ್ರ ರಾವ್, ಅನಾರೋಗ್ಯದ ಕುರಿತಾಗಿ ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ತಿಳಿಸಿದ್ದಾರೆ ಹಾಗೂ ಈ ಪ್ರಕರಣದ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದಾರೆ.












Click it and Unblock the Notifications