ಯಡಿಯೂರಪ್ಪಗೆ ಪ್ರೀತಿ ತೋರಿದ ವಿಕಲಚೇತನ ಮಕ್ಕಳು

ಆನಂದರಾವ್ ವೃತ್ತದ ಬಳಿ, ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೌರ್ಯ ಹೊಟೇಲಿನ ಎದುರು ಜಮಾಯಿಸಿದ್ದ, ಕುಮಾರಕೃಪಾ ರಸ್ತೆಯಲ್ಲಿರುವ 'ಮಾತೃಶ್ರೀ ಮನೋವಿಕಾಸ ಕೇಂದ್ರ'ದ 120ಕ್ಕೂ ಹೆಚ್ಚಿನ ವಿಕಲಚೇತನ, ಅಂಗವಿಕಲ ಮಕ್ಕಳು ಯಾವುದೇ ಘೋಷಣೆಗಳನ್ನು ಕೂಗದೆ, ಬಂದು ನೆರೆದು, ಹಾಡಿ ರಂಜಿಸಿದರು.
ಈ ಮನೋವಿಕಾಸ ಕೇಂದ್ರದ ಗೌರವ ಕಾರ್ಯದರ್ಶಿಯಾಗಿರುವ ಬಸವರಾಜು ಅವರು ದಟ್ಸ್ ಕನ್ನಡದೊಡನೆ ಮಾತನಾಡುತ್ತ, "ಯಡಿಯೂರಪ್ಪನವರನ್ನು ಬೆಂಬಲಿಸಿದ್ದರ ಹಿಂದೆ ಯಾವುದೇ ರಾಜಕೀಯವಿಲ್ಲ. ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಮಕ್ಕಳಿಗೆ ಸೈಕಲ್ ಗಳನ್ನು ನೀಡಿದ್ದರು. ಆ ಕಾರಣ ಅವರ ಪರ ಮಕ್ಕಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು" ಎಂದರು.
ಯಡಿಯೂರಪ್ಪನವರಿಗೆ ಅಧಿಕಾರ ಇರಲಿ, ಇಲ್ಲದಿರಲಿ ನಾವು ಯಾವತ್ತಿಗೂ ನಿಮ್ಮೊಂದಿಗಿರುತ್ತೇವೆ, ನೀವು ಎಂದಿಗೂ ಚೆನ್ನಾಗಿರಬೇಕೆಂಬ ಆಶಯವಷ್ಟೇ ನಮ್ಮ ಸಂಸ್ಥೆ ಮತ್ತು ಮಕ್ಕಳಲ್ಲಿದೆ ಎಂದು ಬಸವರಾಜ್ ತಿಳಿಸಿದರು.












Click it and Unblock the Notifications