ತಿರಸ್ಕರಿಸಿದ ಪ್ರೇಮಿಯ ಮೇಲೆ ಹುಡುಗಿ ಆಸಿಡ್ ದಾಳಿ

ಆಸಿಡ್ ಎರಚಿ ಪೊಲೀಸರಿಂದ ಬಂಧಿತಳಾಗಿರುವ ಹುಡುಗಿ ಆರತಿ (24). ಆಕೆ ಕಳೆದ ಐದು ವರ್ಷಗಳಿಂದ ವಿನೀತ್ (27) ಎಂಬಾತನೊಂದಿಗೆ ಪ್ರೇಮದ ಮಡುವಿನಲ್ಲಿ ಬಿದ್ದಿದ್ದಳು. ಮದುವೆಯ ಪ್ರಸ್ತಾಪವನ್ನೂ ಆರತಿ ಪ್ರಿಯಕರನ ಮುಂದೆ ಇಟ್ಟಿದ್ದಳು. ಪ್ರಸ್ತಾವನೆಯನ್ನು ಆತ ಮುಂದೂಡತ್ತಲೇ ಬಂದಿದ್ದ.
ಸಹನೆ ಕಳೆದುಕೊಂಡ ಆರತಿ, ಒಂದು ದಿನ ನಿನ್ನ ಜೊತೆ ಮಾತನಾಡಬೇಕೆಂದು ವಿನೀತ್ ನನ್ನು ಕ್ರಾಸ್ ರಿವರ್ ಮಾಲ್ ಬಳಿ ಬರಲು ಹೇಳಿದ್ದಾಳೆ. ಆತ ಬರುತ್ತಲೇ, ಮಾತನಾಡುವ ನೆಪದಲ್ಲಿ ಬ್ಯಾಗಿನಿಂದ ಆಸಿಡ್ ತೆಗೆದು ಮುಖಕ್ಕೆ ಎರಚಿದ್ದಾಳೆ. ನಂತರ ಆರತಿ ತಾನಾಗಿಯೇ ಪೊಲೀಸರೆದಿರು ಶರಣಾಗಿದ್ದಾಳೆ.
ವಿನೀತ್ ನನ್ನು ಗುರು ತೇಗ್ ಬಹಾದ್ದೂರ್ (ಜಿಟಿಬಿ) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೇ.40ರಷ್ಟು ಸುಟ್ಟ ಗಾಯಗಳಾಗಿವೆ. ಆತನ ಸ್ಥಿತಿ ಇನ್ನೂ ಚಿಂತಾಜನಕವಾಗಿಯೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಆತನ ಹೇಳಿಕೆಯನ್ನು ಪಡೆದಿರುವ ಪೊಲೀಸರು ಆರತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.












Click it and Unblock the Notifications