ಹೈದರಾಬಾದ್ ತಲುಪಿದ ಸಿಬಿಐ: ಸಂಜೆ4ಕ್ಕೆ ರೆಡ್ಡಿ ಕೋರ್ಟಿಗೆ

ಬಂಧಿತರಿಬ್ಬರನ್ನೂ ಹೈದರಾಬಾದಿನ ಕೋಠಿಯಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಸಂಜೆ 4 ಗಂಟೆ ವೇಳೆಗೆ ನಾಂಪಲ್ಲಿಯಲ್ಲಿರುವ ಸಿಬಿಐ ಕೋರ್ಟಿನಲ್ಲಿ ಅವರನ್ನು ಹಾಜರುಪಡಿಸಲಾಗುವುದು ಎಂದು ಸಿಬಿಐ ಡಿಐಜಿ ಲಕ್ಷ್ಮಿನಾರಾಯಣ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಬಲವಾದ ಸಾಕ್ಷ್ಯವಿಲ್ಲದೆ ಸಿಬಿಐ ಯಾರ ಮೇಲೂ ಕ್ರಮ ಜರುಗಿಸದು. ಪ್ರಸ್ತುತ, ತಮ್ಮ ಬಂಧನದಲ್ಲಿರುವ ರೆಡ್ಡಿ ಜೋಡಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಆ ಹಿನ್ನೆಲೆಯಲ್ಲಿ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ' ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಇಬ್ಬರನ್ನೂ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರುವುದಾಗಿ ಅವರು ತಿಳಿಸಿದ್ದಾರೆ.












Click it and Unblock the Notifications