ಸಿಬಿಐ ದಾಳಿ: ಜನಾ ರೆಡ್ಡಿ ಮನೆಯಲ್ಲಿ 30 ಕೆಜಿ ಚಿನ್ನ ಪತ್ತೆ
ಬಳ್ಳಾರಿ,
ಸೆ.5: ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿಸ ಸಂದರ್ಭದಲ್ಲಿ ಅಪಾರ ಪ್ರಮಾಣದ ಹಣ ಮತ್ತು ಚಿನ್ನ ಪತ್ತೆಯಾಗಿದೆ. id="toptextpromo">ಜನಾರ್ದನ
ರೆಡ್ಡಿ ಅವರ ಕುಟೀರ ನಿವಾಸದಲ್ಲಿ 3 ಕೋಟಿ ರುಪಾಯಿ ನಗದು ಮತ್ತು 30 ಕೆಜಿ ಚಿನ್ನ ಪತ್ತೆಯಾಗಿದೆ. ಹಾಗೆಯೇ ಶ್ರೀನಿವಾಸ್ ರೆಡ್ಡಿ ನಿವಾಸವನ್ನು ಜಾಲಾಡಿದಾಗ 3 ಕೋಟಿ ರುಪಾಯಿ ಹಣ ಪತ್ತೆಯಾಗಿದೆ ಎಂದು ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಸುವರ್ಣ ನ್ಯೂಸ್ ಚಾನೆಲ್ ಇದೀಗ ತಾನೇ ವರದಿ ಬಿತ್ತರಿಸುತ್ತಿದೆ. id='are-slot-1' class='oiad oi-axt oiadv'> id='top-searched-articles'>ಸಿಬಿಐನ
ಒಂದು ತಂಡ ರೆಡ್ಡಿ ದ್ವಯರನ್ನು ಹೈದರಾಬಾದಿಗೆ ಎತ್ತಿಹಾಕಿಕೊಂಡು ಹೋಗಿದ್ದರೆ ಮತ್ತೆರಡು ತಂಡ ಬಳ್ಳಾರಿ ನಿವಾಸಗಳಲ್ಲಿ ಶೋಧಕಾರ್ಯ ಮುಂದುವರಿಸಿವೆ. ಬಹುಮೂಲ್ಯ ದಾಖಲೆಗಳು, ಅಪಾರ ನಗದು ಸಂಪತ್ತು ಸಿಬಿಐ ಪೊಲೀಸರಿಗೆ ದೊರೆತಿದೆ ಎನ್ನಲಾಗಿದೆ. ಇದೇ ವೇಳೆ ಮತ್ತೊಂದು ತಂಡ ಬೆಂಗಳೂರಿನಲ್ಲಿರುವ ಜನಾ ರೆಡ್ಡಿ ನಿವಾಸದ ಮೇಲೂ ದಾಳಿ ಮುಂದುವರಿಸಿದೆ.











Click it and Unblock the Notifications