ನೆರೆ ಭೀತಿಯಲ್ಲಿ ಜನತೆ, ದೊರೆಯ ಆಸರೆ ದೊರಕುವುದೇ?

Karnataka Rain
ಬೆಂಗಳೂರು, ಸೆ 3: ಕಳೆದ ಮೂರು ದಿನಗಳ ಮಳೆಯ ಅಬ್ಬರಕ್ಕೆ ರಾಜ್ಯ ತತ್ತರಿಸಿದೆ. ಹೇಮಾವತಿ , ತುಂಗಾಭದ್ರಾ, ಕಬಿನಿ, ಕಾವೇರಿ, ನದಿಗಳು ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬಳ್ಳಾರಿ, ಯಾದಗಿರಿ, ರಾಯಚೂರು ಜಿಲ್ಲೆಯ ಕೆಲವು ಗ್ರಾಮಗಳ ಸಂಪರ್ಕ ಕಳೆದುಕೊಂಡ ಜನರು ಕಂಗಲಾಗಿದ್ದಾರೆ.

ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿವೆ. ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಹಲವು ಮನೆಗಳು ಕುಸಿದಿವೆ. ಹೆಚ್ಚಿನವರ ಪಾಲಿಗೆ ಇನ್ನೂ ಆಸರೆ ಮನೆಯೂ ದೊರಕಿಲ್ಲ. ಮತ್ತೊಂದು ನೆರೆಯ ಭೀತಿಯಲ್ಲಿ ಜನರಿದ್ದಾರೆ.

ಕೃಷ್ಣಾರಾಜಸಾಗರ ಜಲಾಶಯದಿಂದ 36 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಕೊಡಗು ಜಿಲ್ಲೆಯೂ ಧಾರಕಾರ ಮಳೆಗೆ ಸಾಕ್ಷಿಯಾಗಿದೆ. ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಹಾರಂಗಿ ಜಲಾಶಯ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ನಾಲೆಗೆ ಬಿಡಲಾಗಿದೆ.

ವಾಯುಭಾರ ಕುಸಿತದ ಕಾರಣದಿಂದ ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮುಂದಿನ 48 ಗಂಟೆಗಳ ಕಾಲ ವ್ಯಾಪಕ ಮಳೆ ಸುರಿಯುವ ನಿರೀಕ್ಷೆಯಿದೆ. ರೈಲು ಮಾರ್ಗಗಳಲ್ಲಿ ಭೂಕುಸಿತವಾಗಿರುವುದರಿಂದ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಸರಕಾರವು ನೆರೆ ಪರಿಹಾರ ಕೈಗೊಳ್ಳಲು ಶಕ್ತವಾಗಿದೆ. ಎಷ್ಟೇ ಹಣ ಬೇಕಿದ್ದರೂ ಅಷ್ಟು ಅನುದಾನ ಬಿಡುಗಡೆ ಮಾಡಲಾಗುವುದು. ರಾಜ್ಯದ ಹಲವು ಕಡೆ ಉಂಟಾಗುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+