ಬಿಜೆಪಿ ಬಿಡಲ್ಲ, ಜೆಡಿಎಸ್ ಸೇರಲ್ಲ : ಬಳ್ಳಾರಿ ಬಾಬು ಶ್ರೀರಾಮುಲು
ಹುಬ್ಬಳ್ಳಿ,
ಸೆ.2: ತಾವು ಜೆಡಿಎಸ್ ಪಕ್ಷ ಸೇರುವುದಾಗಿ ಹಬ್ಬಿರುವ ಗಾಳಿಸುದ್ದಿಯನ್ನು ಬಿಜೆಪಿ ನಾಯಕ ಶ್ರೀರಾಮುಲು ಬಲವಾಗಿ ಅಲ್ಲಗಳೆದಿದ್ದಾರೆ. 'ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಸೇರುವುದಿಲ್ಲ' ಎಂದು ಸಚಿವ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಶುಕ್ರವಾರ ಹುಬ್ಬಳ್ಳಿಯಲ್ಲಿ ಸ್ಪಷ್ಟಪಡಿಸಿದ್ದಾರೆ. id="toptextpromo">ಇದೇ
ವೇಳೆ, ಜನನಾಯಕ ಶ್ರೀರಾಮುಲು ಅವರು ಬಿಜೆಪಿ ತೊರೆಯುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಅವರ ಬೆಂಬಲಿಗರು ಬಳ್ಳಾರಿಯಲ್ಲಿ ಬೃಹತ್ ಸಭೆ ನಡೆಸಲು ನಿರ್ಧರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದಕ್ಕೂ
ಮುನ್ನ, ಲೋಕಾಯುಕ್ತ ಅಕ್ರಮ ಗಣಿಗಾರಿಕೆ ವರದಿಯನ್ನು ನೆಪವಾಗಿಸಿಕೊಂಡು ಬಳ್ಳಾರಿ ಜನಾರ್ದನ ರೆಡ್ಡಿ ಸಹೋದರರನ್ನು ಬಿಜೆಪಿ ದೂರ ಮಾಡುತ್ತಿದೆ. ಇದು ಜನಾರ್ದನ ರೆಡ್ಡಿ ಅವರ ಬಲಗೈ ಬಂಟ ಶ್ರೀರಾಮುಲು ಅವರಿಗೆ ತೀವ್ರ ಅಸಮಾಧಾನ ತಂದಿದೆ. ಜತೆಗೆ ಭವಿಷ್ಯದಲ್ಲಿ ರಾಜಕೀಯ ನೆಲೆಕಂಡುಕೊಳ್ಳಲು ಶ್ರೀರಾಮುಲು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಗಣೇಶನ ಹಬ್ಬದ ಸಂದರ್ಭದಲ್ಲಿ ಕಾಡ್ಗಿಚ್ಚಿನಂತೆ ರಾಜ್ಯಾದ್ಯಂತ ಹರಡಿತ್ತು.











Click it and Unblock the Notifications