ಗೌರಿ ಹಬ್ಬದಂದು ಬೆಂಕಿಯಲ್ಲಿ ಬೆಂದ ಮಹಾಲಕ್ಷ್ಮಿ

ವಿಜಯನಗರ 6 ನೇ ಮುಖ್ಯರಸ್ತೆಯಲ್ಲಿ ಬಳಿ ವಾಸವಾಗಿರುವ ಮಹಾಲಕ್ಷ್ಮಿ(62) ಅವರು ಬೆಳಗ್ಗೆ ಗೌರಿ ಹಬ್ಬದ ಪೂಜೆ ಮುಗಿಸಿಕೊಂಡು 10.30ರ ಸುಮಾರಿಗೆ ಗಾಂಧಿಪಾರ್ಕ್ ಗೆ ಬಂದಿದ್ದರು ಎನ್ನಲಾಗಿದೆ. ಪಾರ್ಕ್ ನಲ್ಲಿ ಏಕಾಏಕಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆಕೆಯನ್ನು ಸಾರ್ವಜನಿಕರು ರಕ್ಷಿಸುವ ಹೊತ್ತಿಗೆ ದೇಹದ ಅರ್ಧಭಾಗ ಬೆಂಕಿಗೆ ಆಹುತಿಯಾಗಿತ್ತು.
ಶೇ.50ರಷ್ಟು ಸುಟ್ಟ ಗಾಯಗಳಾಗಿರುವ ಮಹಾಲಕ್ಷ್ಮಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಮಹಾಲಕ್ಷ್ಮಿ ಅವರ ಆತ್ಮಹತ್ಯೆ ಯತ್ನಕ್ಕೆ ಏನು ಕಾರಣ ಎಂದು ತಿಳಿದು ಬಂದಿಲ್ಲ. ಅವರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ತನಿಖೆ ನಡೆಸುತ್ತಿದ್ದೇವೆ ಎಂದು ವಿಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್ ಹೇಳಿದರು.












Click it and Unblock the Notifications