288 ಗಂಟೆ ಉಪವಾಸಕ್ಕೆ ಕೊನೆಹಾಡಿದ ಅಣ್ಣಾ ಹಜಾರೆ
ಹೊಸದಿಲ್ಲಿ,
ಆಗಸ್ಟ್ 28: ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ 12 ದಿನಗಳಿಂದ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ 74 ವರ್ಷದ ಅಣ್ಣಾ ಹಜಾರೆ ಅವರು ಭಾನುವಾರ ಬೆಳಗ್ಗೆ 10.18ಕ್ಕೆ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ. ಅಣ್ಣಾ ಉಪವಾಸ ನಿಲ್ಲಿಸುತ್ತಿದ್ದಂತೆ ಇಡೀ ದೇಶದಲ್ಲಿ ಸಂಚಲವವುಂಟು ಮಾಡಿದ್ದು, ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. id="toptextpromo">ಕೇಂದ್ರ
ಸರಕಾರ ಅದರಲ್ಲೂ ಇಡೀ ಸಂಸತ್ತು ಅಣ್ಣಾ ಅವರ ಮೂರು ಬೇಡಿಕೆಗಳಿಗೆ ಒಕ್ಕೊರಲ ಸಮ್ಮತಿ ಸೂಚಿಸಿರುವುವ ಬಗ್ಗೆ ನಿನ್ನೆ ರಾತ್ರಿ ಅಣ್ಣಾಗೆ ತಿಳಿಸಲಾಗಿತ್ತು. ರಾತ್ರಿ ವೇಳೆ ಉಪವಾಸ ವ್ರತವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ ಅಣ್ಣಾ ಭಾನುವಾರ ಬೆಳಗ್ಗೆ 10ಕ್ಕೆ ಉಪವಾಸ ಸತ್ಯಾಗ್ರಹ ಕೈಬಿಡುವುದಾಗಿ ಹೇಳಿದ್ದರು. id='are-slot-1' class='oiad oi-axt oiadv'> id='top-searched-articles'>ಉಪವಾಸದ
ವೇಳೆ ಅಣ್ಣಾ ವ್ಯಕ್ತಿತ್ವ ಹಿಮಾಲಯದೆತ್ತರ ಬೆಳೆದಿದ್ದರೆ ಅವರು 7.5 ಕೆಜಿಯಷ್ಟು ಹಗರುವಾಗಿದ್ದಾರೆ. ದೆಹಲಿಯ ದಲಿತ ಕುಟುಂಬದ ಹೆಣ್ಣು ಮಗು ಸಿಮ್ರನ್ ಅಣ್ಣಾಗೆ ಎಳನೀರು ನೀಡಿ, ದಣಿದ ಜೀವಕ್ಕೆ ನೆರವಾದರು. ಉಪವಾಸ ನಿಲ್ಲಿಸುತ್ತಿದ್ದಂತೆ ವೈದ್ಯರು ಅಣ್ಣಾ ಚಿಕಿತ್ಸೆಗೆ ಮುಂದಾದರು.











Click it and Unblock the Notifications