ಎನ್ಆರ್ ಕಾಲೋನಿ: ಕಿಲ್ಲರ್ ಬಿಎಂಟಿಸಿಗೆ 2 ಮಹಿಳೆಯರು ಬಲಿ

killer-bmtc-nr-colony-accident-2-women-die
ಬೆಂಗಳೂರು, ಆಗಸ್ಟ್ 27: ಶುಕ್ರವಾರ ಸಂಜೆ 6.30ರಲ್ಲಿ ಎನ್ಆರ್ ಕಾಲೋನಿ ಮಾರುಕಟ್ಟೆಯಿಂದ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಉತ್ತರಹಳ್ಳಿಯ ಮಮತಾ ನಾಗೇಶ್‌ (42) ಮತ್ತು ಬಿಎನ್‌ಎಸ್‌ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಜಯಾ (20) ಅವರ ಮೇಲೆ ರೂಟ್ ನಂಬರ್ 31ಇ ಬಿಎಂಟಿಸಿ ಬಸ್ ನುಗ್ಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿನಿ ಶೀಬಾ (20) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಚಾಲಕನಿಗೆ ಮೂರ್ಛೆ ಬಂದು, ಬಸ್ಸಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೆಜೆಸ್ಟಿಕ್‌ನಿಂದ ತ್ಯಾಗರಾಜ ನಗರ ಕಡೆಗೆ ಹೊರಟ್ಟಿದ್ದ ಬಸ್‌ ಎನ್ಆರ್ ಕಾಲೋನಿ ದಾಟಿ, ಕಟ್ಟೆ ಬಳಗದ ಎದುರು ಎಡ ತಿರುವು ಪಡೆದು ಸ್ವಲ್ಪ ದೂರ ಹೋಗುತ್ತಿದ್ದಂತೆ ಕಂಡಕ್ಟರಿಗೆ ಫಿಟ್ಸ್ ಬಂದು ಅಪಘಾತವಾಗಿದೆ. ನಡೆದುಕೊಂಡು ಹೋಗುತ್ತಿದ್ದ ಮಮತಾ ನಾಗೇಶ್‌, ಜಯಾ ಹಾಗೂ ಶೀಬಾ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಿಎಂಟಿಸಿ ಅಪಘಾತದಿಂದ ಇಬ್ಬರು ಮೃತಪಟ್ಟ ಘಟನೆಯಿಂದ ಕೆರಳಿದ ಸಾರ್ವಜನಿಕರು ಬಸ್‌ ಮೇಲೆ ಕಲ್ಲು ತೂರಾಟ ನಡೆಸಿ ಸಂಪೂರ್ಣ ಜಖಂಗೊಳಿಸಿದ್ದಾರೆ. ಚಾಲಕರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಈ ಘಟನೆಯಿಂದ ಸಾಬೀತಾಗುತ್ತದೆ. ಅಭ್ಯರ್ಥಿಗಳ ಆರೋಗ್ಯ ಸರಿಯಿಲ್ಲದಿದ್ದರೂ ಲಂಚ ತಿಂದು ಅಂಥಹವರನ್ನೇ ನೇಮಕ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ.

ಇದು ಬಿಎಂಟಿಸಿಯ ಸಂಪೂರ್ಣ ಬೇಜವಾಬ್ದಾರಿತನ. ದೈಹಿಕವಾಗಿ ಸಮರ್ಥರಾಗಿರುವ ಚಾಲಕರನ್ನೇ ರೂಟ್ ಮೇಲೆ ಕಳಿಸಬೇಕು. ಇಲ್ಲವಾದಲ್ಲಿ ಬಿಎಂಟಿಸಿ ಅಪಘಾತಗಳಿಗೆ ಇನ್ನೂ ಎಷ್ಟು ಮಂದಿ ಬಲಿಯಾಗಬೇಕೋ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+