ಗುಜರಾತ್‌ಗೆ ಕೊನೆಗೂ ಲೋಕಾಯುಕ್ತ; ನೇಮಕದ ವಿರುದ್ಧ ಮೋದಿ ಕೋರ್ಟ್‌ಗೆ

ಆದರೆ 'ಇದು ಏಕಪಕ್ಷೀಯ ಹಾಗೂ ಅಸಾಂವಿಧಾನಿಕ ಕ್ರಮ" ಎಂದು ಆರೋಪಿಸಿ, ಗುಜರಾತ್ ಸರಕಾರ ತಕ್ಷಣ ರಾಜ್ಯಪಾಲರ ಈ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದೆ. ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಎಸ್ ಜೆ ಮುಖ್ಯೋಪಾಧ್ಯಾಯ ಅವರು ಮೆಹ್ತಾರ ಹೆಸರನ್ನು ಸರಕಾರಕ್ಕೆ ಸೂಚಿಸಿದ್ದರು. ಆದರೆ ಸರಕಾರ ಈವರೆಗೂ ಅವರನ್ನು ನೇಮಕ ಮಾಡುವ ಗೋಜಿಗೇ ಹೋಗಿರಲಿಲ್ಲ.
ಆದರೆ ಲೋಕಾಯುಕ್ತ ನೇಮಕ ಮಾಡದ ಕುರಿತು ಮುಖ್ಯಮಂತ್ರಿ ನರೇಂದ್ರ ಮೋದಿಯತ್ತ ಬೆಟ್ಟು ಮಾಡಿರುವ ರಾಜ್ಯಪಾಲೆ ಕಮಲಾ, 'ಸಾಕಷ್ಟು ಬಾರಿ ಈ ಬಗ್ಗೆ ನೆನಪಿಸಿದ್ದರೂ, ಒಂದಲ್ಲ ಒಂದು ನೆಪ ಹೇಳಿ ರಾಜ್ಯ ಸರಕಾರ ಲೋಕಾಯುಕ್ತರ ನೇಮಕವನ್ನು ಮುಂದೂಡುತ್ತಾ ಬಂದಿತ್ತು. ಇದಕ್ಕೆ ಕಾರಣವೇನೆಂಬುದನ್ನು ಸರಕಾರವೇ ಹೇಳಬೇಕು. ಆದರೆ ರಾಜ್ಯದಲ್ಲಿನ ಆಗುಹೋಗುಗಳ ಕುರಿತು ತಾನು ಮೂಕ ಪ್ರೇಕ್ಷಕಿಯಾಗಿರಲಾರೆ" ಎಂದು ಹೇಳುವ ಮೂಲಕ ಗುಜರಾತ್ ಸರಕಾರ ಹಾಗೂ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದ್ದಾರೆ.
'ಸಾಮಾನ್ಯವಾಗಿ ರಾಜ್ಯಪಾಲರು ಮುಖ್ಯಮಂತ್ರಿ ನೇತೃತ್ವದ ರಾಜ್ಯ ಸಚಿವ ಸಂಪುಟದ ಸಲಹೆಯ ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಆದರೆ ಇನ್ನು ವೌನವಾಗಿರಲು ಸಾಧ್ಯವಿಲ್ಲದಂತಹ ಸನ್ನಿವೇಶ ಸೃಷ್ಟಿಯಾಗಿರಬಹುದು. ಆದ್ದರಿಂದ ಅವರು ತನ್ನ ವಿವೇಚನೆಯಂತೆ ಈ ನಿರ್ಧಾರ ಕೈಗೊಂಡಿದ್ದಾರೆ "ಎಂದು ರಾಜಭವನದ ಪ್ರಕಟನೆ ತಿಳಿಸಿದೆ.
ಗುಜರಾತ್ ಲೋಕಾಯುಕ್ತ ಕಾಯ್ದೆ 1986ರ ಕಲಂ 3(1)ರ ಅನ್ವಯ ತನ್ನ ಅಧಿಕಾರದ ವ್ತಾಪ್ತಿಯನ್ನು ಬಳಸಿ ರಾಜ್ಯದಲ್ಲಿ ಪಾರದರ್ಶಕ ಆಡಳಿತವನ್ನು ಕಾಪಾಡುವ ಒಟ್ಟಾರೆ ಹಿತದಲ್ಲಿ ರಾಜ್ಯಪಾಲರು ನೂತನ ಲೋಕಾಯುಕ್ತರನ್ನು ನೇಮಿಸಿ ಆಗಸ್ಟ್ 25ರಂದು ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.












Click it and Unblock the Notifications