ಅಣ್ಣಾ ಬೇಡಿಕೆಗಳಿಗೆ ಒಪ್ಪಿಗೆ, ಇಂದು ಉಪವಾಸ ಅಂತ್ಯ

ಆ ಶಿಫಾರಸುಗಳು
* ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕವಾಗಬೇಕು.
* ಸರಕಾರಿ ಕಚೇರಿಗಳಲ್ಲಿ ನಾಗರಿಕ ಸನ್ನದು ಅನುಷ್ಠಾನಕ್ಕೆ ತರಬೇಕು.
* ಕೆಳಹಂತದ ಅಧಿಕಾರಿಗಳನ್ನೂ ಲೋಕಪಾಲ ವ್ಯಾಪ್ತಿಗೆ ತರಬೇಕು.
ಈ ಮೂರು ಶಿಫಾರಸುಗಳನ್ನು ಒಪ್ಪುವರೆಗೆ ಉಪವಾಸ ಕೈಬಿಡುವುದಿಲ್ಲ ಎಂದು ಅಣ್ಣಾ ಹಜಾರೆ ಹಠ ಹಿಡಿದು ಕುಳಿತಿದ್ದರು. ಈ ಶಿಫಾರಸುಗಳನ್ನು ಬಿಜೆಪಿ ಕೂಡ ಬೆಂಬಲಿಸಿದೆ. ಇದರಿಂದ ಬೆಚ್ಚಿಬಿದ್ದಿದ್ದ ಯುಪಿಎ ಸರಕಾರ ಶನಿವಾರ ಜನ ಲೋಕಪಾಲ ಮಸೂದೆ ಕುರಿತಂತೆ ನಡೆದ ಚರ್ಚೆಯಲ್ಲಿ ತಾತ್ವಿಕವಾಗಿ ಒಪ್ಪಿಗೆ ನೀಡಿದೆ.
ಅಣ್ಣಾ ಹಜಾರೆಯವರು ಇಂದು ಸಂಜೆ 6 ಗಂಟೆಗೆ ಉಪವಾಸಕ್ಕೆ ಕೊನೆ ಹಾಡಲಿದ್ದಾರೆ. ಇದು ಅಣ್ಣಾ ಹಜಾರೆಗೆ ಮಾತ್ರವಲ್ಲ ಇಡೀ ದೇಶಕ್ಕೆ ಸಿಕ್ಕ ಜಯ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀಶ್ರೀ ರವಿಶಂಕರ್ ಗುರೂಜಿ ಅವರು ಹೇಳಿದ್ದಾರೆ.











Click it and Unblock the Notifications