ಮಾಜಿ ಪ್ರಧಾನಿ ರಾಜೀವ್ ಹಂತಕರಿಗೆ ಸೆ.9ರಂದು ನೇಣು

death-to-rajiv-gandhi-killers-on-sept-9
ಚೆನ್ನೈ, ಆಗಸ್ಟ್ 27: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಇಬ್ಬರು ಶ್ರೀಲಂಕನ್ನರು ಮತ್ತು ಒಬ್ಬ ಭಾರತೀಯ ಪ್ರಜೆಯನ್ನು ಸೆಪ್ಟೆಂಬರ್ 9ರಂದು ವೆಲ್ಲೂರು ಜೈಲಿನಲ್ಲಿ ನೇಣಿಗೆ ಏರಿಸಲಾಗುವುದು ಎಂದು ಜೈಲಿನ ಸೂಪರಿಂಟೆಂಡೆಂಟ್ ಆರ್. ಅರುವುದೈನಂಬಿ ತಿಳಿಸಿದ್ದಾರೆ.

ಹಂತಕರಾದ ಮುರುಗನ್, ಸಾಂತನ್ ಮತ್ತು ಪೆರರಿವಾಳನ್ ಅವರ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವಂತೆ ಶುಕ್ರವಾರ ಮಧ್ಯಾಹ್ನ ತಮಗೆ ಸರ್ಕಾರದ ಆದೇಶ ತಲುಪಿದೆ. ಈ ಕ್ಷಣದಿಂದಲೇ ಹಂತಕರ ಚಲನವಲನವನ್ನು ನಿರ್ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಆಗಸ್ಟ್ 11ರಂದು ಈ ಮೂವರ ಕ್ಷಮದಾನದ ಅರ್ಜಿಯನ್ನು ತಿರಸ್ಕರಿಸಿದ್ದರು.

ರಾಜೀವ್ ಗಾಂಧಿ ಅವರನ್ನು 1991ರ ಮೇ 21ರಂದು ಚೆನ್ನೈ ಬಳಿಯ ಶ್ರೀಪೆರಂಬದೂರಿನಲ್ಲಿ ಮಾನವ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ 21 ಜನರ ವಿರುದ್ಧ ಆರೋಪ ಹೊರಿಸಲಾಗಿತ್ತು. ಇವರಲ್ಲಿ ನಳಿನಿ ಸೇರಿದಂತೆ ಮೂವರಿಗೆ ವಿಶೇಷ ವಿಚಾರಣಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ನಳಿನಿಯ ಕ್ಷಮಾದಾನದ ಅರ್ಜಿಯನ್ನು ಮನ್ನಿಸುವಂತೆ ರಾಜೀವ್ ಪತ್ನಿ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದರು. ಇದನ್ನು ರಾಷ್ಟ್ರಪತಿ ಪುರಸ್ಕರಿಸಿದ್ದರು. ಮುರುಗನ್ ಅನ್ನು ಮದುವೆಯಾಗಿದ್ದ ನಳಿನಿ ಜೈಲಿನಲ್ಲೆ ಮಗುವಿಗೆ ಜನ್ಮ ನೀಡಿದ್ದಳು. ಈ ಮಧ್ಯೆ ತಮಿಳುನಾಡಿನಲ್ಲಿ ರಾಜೀವ್ ಹಂತಕರನ್ನು ನೇಣುಗಂಬಕ್ಕೆ ಏರಿಸುವ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+