ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿ ಆಂಜನೇಯ ದುಃಸ್ಥಿತಿ, ನೈಸ್ ಗೆ 15 ಕೋಟಿ ದಂಡ

By Mahesh
|
Google Oneindia Kannada News

NICE Spokesperson Manjunath
ಬೆಂಗಳೂರು, ಆ.26: ಭಾರಿ ಮಳೆ ಸುರಿದಾಗೆಲ್ಲ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿ, ಸಾರ್ವಜನಿಕ ಆಸ್ತಿ ನಷ್ಟ ಉಂಟಾಗುವುದು ಮಾಮೂಲಿ ವಿಷಯವಾಗಿದೆ.

ದೇಗುಲಕ್ಕೆ ಕೊಳಚೆ ನೀರು ಹರಿಯುವಂತೆ ಮಾಡಿದ ಆರೋಪದ ಮೇಲೆ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್)ಗೆ ರೂ 15 ಕೋಟಿ ದಂಡ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಿರ್ಧರಿಸಿದೆ.

ಆದರೆ, ಬಿಬಿಎಂಪಿ ಆರೋಪವನ್ನು ಅಲ್ಲಗೆಳೆದಿರುವ ನೈಸ್ ವಕ್ತಾರ ಮಂಜುನಾಥ ನಾಯ್ಕರ್, ಕಳೆದ ಹಲವು ವರ್ಷಗಳಿಂದ ಗಾಳಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗುತ್ತಿದೆ. ಈ ಪ್ರದೇಶದಲ್ಲಿ ನೈಸ್ ಕಾಮಗಾರಿ ಆರಂಭಿಸಿಸು ಒಂದು ತಿಂಗಳು ಕಳೆದಿದೆ ಅಷ್ಟೇ.

ಸುಪ್ರೀಂಕೋರ್ಟ್‌ನ ತೀರ್ಪಿನ ಮೇರೆಗೆ ಕಾಮಗಾರಿ ನಡೆಸಲು ಬೇಕಾದ ಎಲ್ಲಾ ಅನುಮತಿ ಪಡೆದ ಮೇಲೆ ಕೆಲಸ ಪ್ರಾರಂಭಿಸಿದ್ದೇವೆ ಎಂದಿದ್ದಾರೆ.

ಅಂಜನೇಯ ದೇಗುಲ ಆಧಾರ ಮುರಿದ ನೈಸ್ : ದೇಗುಲದಿಂದ ಒಂದು ಕಿ.ಮೀ ದೂರದಲ್ಲಿರುವ ರಾಜಾಕಾಲುವೆ ಒತ್ತುವರಿ ಮಾಶಿಕೊಂಡಿರುವ ನೈಸ್ ಸಂಸ್ಥೆ, ತನ್ನ ಕಾಮಗಾರಿಯಾಗಿ ತಾತ್ಕಾಲಿಕ ಆಣೆಕಟ್ಟನ್ನು ನಿರ್ಮಿಸುತ್ತಿದೆ.

ಮರಳಿನ ಮೂಟೆಗಳಿಂದ ಅಣೆಕಟ್ಟು ಮಾಡಿ ಕಾಲುವೆ ಮಧ್ಯದಲ್ಲಿ ಪಿಲ್ಲರ್ ನಿರ್ಮಿಸಲಾಗುತ್ತಿದೆ. ಭಾರಿ ಮಳೆ ಬಿದ್ದರೆ ಮಧ್ಯ ಭಾಗದಲ್ಲಿ ಇರುವ ಈ ತಡೆಗೋಡೆಯಿಂದ ಕೊಳಚೆ ನೀರು ಅಂಜನೇಯನ ಪಾದ ಸೇರುತ್ತದೆ.

ನಿದ್ದೆಯಿಂದ ಎದ್ದ ಬಿಬಿಎಂಪಿ:
ಗುರುವಾರ ಸಂಪುಟ ಸಭೆಯಲ್ಲಿ ನೈಸ್ ಹಾಗೂ ಅಂಜನೇಯ ದೇಗುಲ ದುಃಸ್ಥಿತಿ ಬಗ್ಗೆ ಪ್ರಸ್ತಾಪವಾಗಿದೆ. ಮುಖ್ಯಮಂತ್ರಿ ಸದಾನಂದ ಗೌಡರು ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ.

ನಂತರ ಈ ಕುರಿತು ವರದಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ರಂಗನಾಥ್ ಅವರು ಸೂಚಿಸಿದ್ದಾರೆ. ನಂತರ ನೈಸ್ ಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ.

English summary
BBMP has alleged BMIC NICE has encroached land near Gali Anjaneya swamy Temple Mysore road. BBMP decided to imposed fine of Rs 15 crore on Nice for the damage caused to the public property. However NICE spokesperson Manjunath has declined the allegation made by BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X