ಅಣ್ಣಾ ಆಂದೋಲನ ದಮನಕ್ಕೆ ಯತ್ನ: ನರೇಂದ್ರ ಮೋದಿ

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಚಳವಳಿಯನ್ನು ಪ್ರಜಾಸತ್ತಾತ್ಮಕ ವಿರೋಧಿ ಚಟುವಟಿಕೆಗಳ ಮೂಲಕ ದಮನಗೊಳಿಸಲು ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.
'ಇಡೀ ದೇಶ ಅಣ್ಣಾ ಅವರ ಆರೋಗ್ಯದ ಕುರಿತು ಕಳವಳಕ್ಕೀಡಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಬಗ್ಗೆ ಮಾತನಾಡುತ್ತಿದೆ. ಅಲ್ಲದೇ ಪ್ರಜಾಸತ್ತಾತ್ಮಕ ವಿರೋಧಿ ಕಾರ್ಯಗಳ ಮೂಲಕ ಅವರ ಚಳವಳಿ ಕೊನೆಗೊಳಿಸುವ ಹುನ್ನಾರ ನಡೆಸುತ್ತಿದೆ' ಎಂದಿದ್ದಾರೆ.
ಇದೇ ರೀತಿ ಭ್ರಷ್ಟಾಚಾರವನ್ನು ವಿರೋಧಿ ಉಪವಾಸ ಕುಳಿತಿದ್ದ ಬಾಬಾ ರಾಮ್ ದೇವ್ ಅವರನ್ನು ದೆಹಲಿ ಪೊಲೀಸರು ಮಧ್ಯರಾತ್ರಿ ಎತ್ತಿಹಾಕಿಕೊಂಡು ಹೋಗಿದ್ದು ಜನಮಾನಸದಲ್ಲಿ ಇನ್ನೂ ಉಳಿದಿದೆ. ಈಗ ಅದೇ ಪೊಲೀಸರು ಅಣ್ಣಾ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಅಣ್ಣಾಗೆ ಬಲವಂತವಾಗಿ ಉಪವಾಸವನ್ನು ನಿಲ್ಲಿಸುವ ಯೋಚನೆಯಲ್ಲಿದೆ ಎನ್ನಲಾಗಿದೆ.












Click it and Unblock the Notifications