'ಕೈ' ಎತ್ತಿದ ಸರಕಾರ; ಅಣ್ಣಾ ಗತಿಯೇನು?

lok-pal-centre-steps-back-anna-health-worries
ನವದೆಹಲಿ, ಆಗಸ್ಟ್ 25: ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹ 10ನೇ ದಿನಕ್ಕೆ ಕಾಲಿರಿಸಿದ್ದು, ಇಡೀ ರಾಷ್ಟ್ರ 'ಅಣ್ಣಾ, ಮೊದಲು ಉಪವಾಸ ನಿಲ್ಲಿಸಿ' ಎಂದು ಒಕ್ಕೊರಲಿಂದ ಅವರಿಗೆ ಮನವಿ ಮಾಡಿದೆ. ಒಂದೇ ಸಮನೆ ಉಪವಾಸದಲ್ಲಿರುವ ಹಿರಿಯ ಜೀವಕ್ಕೆ ಏನಾಗುವುದೋ ಎಂಬ ಆತಂಕದಲ್ಲೇ ಅನೇಕ ಮಂದಿ ನಿನ್ನೆ ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲ.

ಇದಕ್ಕೆ ಕಾರಣ ಬುಧವಾರ ರಾತ್ರಿ ನಡೆದ ಸರ್ವ ಪಕ್ಷ ಸಭೆ ಒಮ್ಮತ ನಿರ್ಧಾರಕ್ಕೆ ಬಾರದಿರುವುದು. ಮತ್ತು ನಮ್ಮ ಕೈಯಲ್ಲೇನೂ ಇಲ್ಲ. ಆಣ್ಣಾ ಉಪವಾಸವನ್ನು ನಿಲ್ಲಿಸುವುದು ನಿಮಗೇ ಬಿಟ್ಟ ವಿಚಾರ ಎಂದು ಸರಕಾರ ಟೀಂ ಅಣ್ಣಾಗೆ ಸ್ಪಷ್ಟಪಡಿಸಿರುವುದು ದುಗುಡವನ್ನು ಹೆಚ್ಚಿಸಿದೆ.

ಸರಕಾರವೇನೋ ಅಣ್ಣಾ ಹೇಳಿದಂತೆ ಈಗಿರುವ ಸರಕಾರಿ ಲೋಕಪಾಲ ಕರಡನ್ನು ವಾಪಸ್ ತೆಗೆದುಕೊಂಡಿದೆ. ಆದರೆ ಹೊಸದನ್ನು ರಚಿಸಿ, ಅದನ್ನು ಮಂಡಿಸುವುದು ನಿಂತ ಘಳಿಗೆಯಲ್ಲೇ ಆಗುವ ವಿಚಾರವಲ್ಲ. ಅದಿನ್ನು ಮುಂದಿನ ವಾರಕ್ಕೆ ಮುಂದೂಡುತ್ತದೆ. ಅಲ್ಲಿಯವರೆಗೆ ಅಣ್ಣಾ ಗತಿಯೇನು!? ಎಂಬುದು ಗುರುವಾರ ಬೆಳಗ್ಗೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ಇದೇ ರೀತಿ ಭ್ರಷ್ಟಾಚಾರವನ್ನು ವಿರೋಧಿ ಉಪವಾಸ ಕುಳಿತಿದ್ದ ಬಾಬಾ ರಾಮ್ ದೇವ್ ಅವರನ್ನು ದೆಹಲಿ ಪೊಲೀಸರು ಮಧ್ಯರಾತ್ರಿ ಎತ್ತಿಹಾಕಿಕೊಂಡು ಹೋಗಿದ್ದು ಜನಮಾನಸದಲ್ಲಿ ಇನ್ನೂ ಉಳಿದಿದೆ. ಈಗ ಅದೇ ಪೊಲೀಸರು ಅಣ್ಣಾ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಅಣ್ಣಾಗೆ ಬಲವಂತವಾಗಿ ಉಪವಾಸವನ್ನು ನಿಲ್ಲಿಸುವ ಯೋಚನೆಯಲ್ಲಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+