ಭ್ರಷ್ಟ ಮಠ, ಸ್ವಾಮೀಜಿಗಳಿಗೆ ಶಿಕ್ಷೆ, ಜನ ಲೋಕಪಾಲಕ್ಕೆ ಇರ್ಲಿ

Kodihalli Chandrashekar
ಬೆಂಗಳೂರು, ಆ.25: ಜನ ಲೋಕಪಾಲ ಮಸೂದೆ ಅಡಿ ಮಠ, ಮಂದಿರಗಳನ್ನು ತರಬೇಕೆಂದು ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಅಣ್ಣಾ ಹಜಾರೆಯ ಹೋರಾಟ ಬೆಂಬಲಿಸಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಮಠ-ಮಂದಿರಗಳಲ್ಲಿ ಭ್ರಷ್ಟಾಚಾರದ ಹಣ ತುಂಬಿ ತುಳುಕುತ್ತಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಧಾರ್ಮಿಕ ಸಂಸ್ಥೆಗಳನ್ನೂ ಲೋಕಪಾಲ ಕಾಯ್ದೆಯಡಿ ತರಬೇಕು.

ಎನ್‌ಜಿಓ ಗಳಿಗೂ ಶಿಕ್ಷೆಯಾಗಲಿ : ಇದರ ಜೊತೆಗೆ ಕೆಲ ಕಾರ್ಪೊರೇಟ್ ವಲಯ ದಿಂದಾಗಿ ರೈತರು ಬದುಕಲು ಸಾಧ್ಯವಾಗುತ್ತಿಲ್ಲ. ಆದುದ ರಿಂದ ಅವರನ್ನೂ ಹಾಗೂ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಓ)ಗಳನ್ನು ಲೋಕಪಾಲ ಮಸೂದೆ ಯಡಿ ತರಬೇಕೆಂದು ಕೋಡಿಹಳ್ಳಿ ಆಗ್ರಹಿಸಿದರು.

ಪಂಚಾಯತ್‌ನಿಂದ ಹಿಡಿದು ಸಂಸತ್ತಿನವರೆಗಿನ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಕ ಭ್ರಷ್ಟಾಚಾರ ತುಂಬಿತುಳುಕುತ್ತಿವೆ. ಇದನ್ನು ತಡೆಗಟ್ಟಬೇಕಾದರೆ ನ್ಯಾಯಾಧೀಶರು ಹಾಗೂ ಪ್ರಧಾನಿಯನ್ನು ಈ ಮಸೂದೆಯಡಿ ತರಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಭ್ರಷ್ಟಾಚಾರದೊಂದಿಗೆ ಮಾಧ್ಯಮಗಳೂ ಕೂಡಾ ಸಾಥ್ ನೀಡುತ್ತಿವೆ. ಒಂದೊಂದು ಮಾಧ್ಯಮಗಳು ಒಬ್ಬೊಬ್ಬ ರಾಜಕಾರಣಿಗಳಿಗೆ ಸಾಥ್ ನೀಡುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿವೆ. ಇನ್ನಾದರೂ ಮಾಧ್ಯಮಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+