ಕೃಷ್ಣ ಭಟ್ ಬೇಟೆ ಆಡಲು ಸೋನಿಯಾ ನಾರಂಗ್ ಸಜ್ಜು

ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಿ ಕೃಷ್ಣಭಟ್(81) ಅವರು ಸೊಸೈಟಿ ಅವ್ಯವಹಾರದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ಸುಳಿವು ಸಿಗದ ಕಾರಣ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಈತನ ಸುಳಿವು ಸಿಕ್ಕರೆ ಕೂಡಲೆ ಜಯನಗರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಅಥವಾ ಬಸವನಗುಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ಹೊರಡಿಸಲಾಗಿತ್ತು.
ವಿಶ್ವಭಾರತಿ ಸಂಘದಲ್ಲಿ ಹಿರಿತನದ ಆಧಾರದ ಮೇಲೆ ಜೇಷ್ಠತಾ ಪಟ್ಟಿ ತಯಾರಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಕೃಷ್ಣಭಟ್ ಆದೇಶವನ್ನು ಉಲ್ಲಂಘಿಸಿದ್ದರು. ಈ ಬಗ್ಗೆ ಶ್ರೀನಿವಾಸರಾಜು ಎಂಬುವವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಆ.19ರಂದು ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.
ಆದರೆ, ಕೃಷ್ಣಭಟ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ದೆಹಲಿಯ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೃಷ್ಣಭಟ್ ಪರ ವಕೀಲರು ಹೇಳಿದ್ದಾರೆ. ಆ.20ರಂದು ಆಸ್ಪತ್ರೆಯಿಂದ ಕೃಷ್ಣಭಟ್ ಡಿಸಾರ್ಜ್ ಆಗಿರುವ ದಾಖಲೆ ಬಹಿರಂಗಗೊಂಡಿದ್ದು, ಭಟ್ ಸುಳಿವು ಇನ್ನೂ ಸಿಕ್ಕಿಲ್ಲ. ಈಗ ಭಟ್ ಬೆನ್ನುತ್ತಿರುವ ದಕ್ಷ ಅಧಿಕಾರಿ ಸೋನಿಯಾ ಅವರು ಹುಡುಕಾಟದಲ್ಲಿ ನಿರತರಾಗಿದ್ದಾರೆ.












Click it and Unblock the Notifications