ಟೊಯೋಟಾದಿಂದ ರು.3800 ಕೋಟಿ ಹೆಚ್ಚುವರಿ ಹೂಡಿಕೆ
ಬೆಂಗಳೂರು,
ಆ. 25: ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ವ್ಯವಸ್ಥಾಪಕ ನಿರ್ದೇಶಕ ಹಿರೋಷಿ ನಕಾಗವಾ ಹಾಗೂ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಶೇಖರ್ ವಿಶ್ವನಾಥ್ ಅವರು ಇಂದು ಭೇಟಿ ಮಾಡಿ ಬೆಂಗಳೂರಿನ ಬಿಡದಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ರು. 3800 ಕೋಟಿ ಹೆಚ್ಹುವರಿ ಹೂಡಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. id="toptextpromo">ಟೊಯೋಟಾ
ಕಿರ್ಲೋಸ್ಕರ್ ಇದುವರೆಗೆ ರಾಜ್ಯದಲ್ಲಿ ಒಟ್ಟು 5400 ಕೋಟಿ ರು. ಗಳನ್ನು ಹೂಡಿಕೆ ಮಾಡಿದ್ದು 2013ರ ಅಂತ್ಯದ ವೇಳೆಗೆ ಹೆಚ್ಚುವರಿಯಾಗಿ ರು. 3800 ಕೋಟಿ ಮಾಡುವ ಮೂಲಕ ಒಟ್ಟೂ 9200 ಕೋಟಿ ರು. ಹೂಡಿಕೆಯಾಗಲಿದೆ. ರಾಜ್ಯದಲ್ಲಿ ಒಟ್ಟೂ 12,900 ಮಂದಿಗೆ ಉದ್ಯೋಗ ನೀಡಿದ್ದು 2013 ರೊಳಗೆ 5300 ಮಂದಿ ಹೆಚ್ಚುವರಿಯಾಗಿ ಉದ್ಯೋಗ ಪಡೆಯಲಿದ್ದಾರೆ ಎಂದರು. id='are-slot-1' class='oiad oi-axt oiadv'> id='top-searched-articles'>ಮುಖ್ಯಮಂತ್ರಿ
ಸದಾನಂದಗೌಡ ಈ ವಿಷಯವಾಗಿ ಪ್ರತಿಕ್ರಯಿಸಿ ಈ ಹೆಚ್ಚುವರಿ ಹೂಡಿಕೆಯಿಂದ ರಾಜ್ಯದ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲು ಸಹಾಯಕವಾಗಲಿದೆ ಎಂದರು.











Click it and Unblock the Notifications